ಬೇಕಾಗುವ ಪದಾರ್ಥಗಳು
• ಬೇಯಿಸಿದ ಆಲೂಗಡ್ಡೆ - 2-3
• ಸಬ್ಬಕ್ಕಿ- 100 ಗ್ರಾಂ
• ಹಸಿಮೆಣಸಿನಕಾಯಿ- ಸಣ್ಣಗೆ ಕತ್ತರಿಸಿದ್ದು 4
• ಜೀರಿಗೆ-ಸ್ವಲ್ಪ
• ಕೊತ್ತಂಬರಿ ಸೊಪ್ಪು- ಸಣ್ಣಗೆ ಕತ್ತರಿಸಿದ್ದು ಸ್ವಲ್ಪ
• ಕಾಳು ಮೆಣಸಿನ ಪುಡಿ- ಸ್ವಲ್ಪ
• ಉಪ್ಪು-ರುಚಿಗೆ ತಕ್ಕಷ್ಟು
• ಕಡಲೆಕಾಯಿ ಬೀಜ- ಹುರಿದು ಪುಡಿ ತರಿತರಿಯಾಗಿ ಪುಡಿ ಮಾಡಿಕೊಂಡದ್ದು ಸ್ವಲ್ಪ
• ಎಣ್ಣೆ- ಕರಿಯಲು ಅಗತ್ಯವಿದ್ದಷ್ಟು
ಮಾಡುವ ವಿಧಾನ...
• ಒಂದು ಪಾತ್ರೆಯಲ್ಲಿ ಸಾಬಕ್ಕಿಯನ್ನು ಹಾಕಿ, ಪಿಷ್ಟ ಹೋಗುವ ತನಕ ಚೆನ್ನಾಗಿ ತೊಳೆಯೆಬೇಕು. ನಂತರ ಅದಕ್ಕೆ ನೀರನ್ನು ಹಾಕಿ 2 ಗಂಟೆಗಳ ಕಾಲ ನೆನೆಯಲು ಬಿಡಬೇಕು.
• ಬೇಯಿಸಿಕೊಂಡ ಆಲೂಗಡ್ಡೆಯನ್ನು ತುರಿದುಕೊಳ್ಳಬೇಕು.
• ಬಳಿಕ ಒಂದು ಪಾತ್ರೆಯಲ್ಲಿ ತುರಿದ ಆಲೂಗಡ್ಡೆ, ನೆನೆಸಿಟ್ಟುಕೊಂಡ ಸಬ್ಬಕ್ಕಿ. ಜೀರಿಗೆ, ಕೊತ್ತಂಬರಿ ಸೊಪ್ಪು, ಹಸಿಮೆಣಸಿನ ಕಾಯಿ, ಉಪ್ಪು, ಕಡಲೆಕಾಯಿ ಬೀಜದ ಪುಡಿ ಎಲ್ಲವನ್ನು ಮಿಶ್ರಣ ಮಾಡಿಕೊಳ್ಳಬೇಕು.
• ನಂತರ ಅಂಗೈ ಮೇಲೆ ಎಣ್ಣೆಯನ್ನು ಹಚ್ಚಿಕೊಂಡು, ವಡೆಯ ಆಕಾರದಲ್ಲಿ ತಟ್ಟಿಕೊಳ್ಳಬೇಕು.ತಟ್ಟಿಕೊಂಡ ಸಬ್ಬಕ್ಕಿಯನ್ನು 5 ನಿಮಿಷ ಫ್ರಿಡ್ಜ್ನಲ್ಲಿ ಇರಿಸಿ ತಂಪಗೆ ಆಗಲು ಬಿಡಿ.
• ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ, ಬಿಸಿ ಮಾಡಿಕೊಳ್ಳಿ. ಎಣ್ಣೆ ಬಿಸಿಯಾದ ಮೇಲೆ ವಡೆಯನ್ನು ಹಾಕಿ, ಕರಿಯಿರಿ.- ಎರಡು ಭಾಗದಲ್ಲಿ ಚೆನ್ನಾಗಿ ಬೆಂದು ಚಿನ್ನದ ಬಣ್ಣ ಬಂದ ಬಳಿಕ ತೆಗೆದರೆ ರುಚಿಕರವಾದ ಸಬ್ಬಕ್ಕಿ ವಡೆ ಸವಿಯಲು ಸಿದ್ಧ.
PublicNext
09/08/2021 05:56 pm