ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಡುಗೆ ಮನೆಯಿಂದ ಮೀನಿನ ವಾಸನೆ ನಿವಾರಿಸಲು ಹೀಗೆ ಮಾಡಿ

ಮನೆಯಲ್ಲಿಯೇ ತಯಾರಿಸಿದ ಅಡುಗೆ ಯಾವಾಗಲೂ ಸುಪರ್ ಆದರೆ ಕೆಲವು ಖಾದ್ಯಗಳನ್ನು ತಯಾರಿಸಿದ ಬಳಿಕ ವಾಸನೆ ಕಳೆಯಲು ಹರಸಾಹಸ ಮಾಡಬೇಕು ಉದಾಹರಣೆಗೆ ಮೀನಿನ ಖಾದ್ಯಗಳು ರುಚಿಯಾಗಿರುತ್ತವೆ. ಆದರೆ ಮೀನಿನ ವಾಸನೆ ಮನೆಯೆಲ್ಲಾ ತುಂಬಿ ಮುಜುಗರ ಉಂಟು ಮಾಡುತ್ತವೆ.

ಮೀನಿನ ವಾಸನೆ ನಿವಾರಣೆಗೆ ಕೆಲವು ಸುಲಭ ವಿಧಾನಗಳಿವೆ.

* ಮೀನಿನ ವಾಸನೆ ನಿವಾರಣೆಗೆ ಬಿಳಿ ವಿನಿಗರ್ ಬೆಸ್ಟ್. ಮೀನನ್ನು ಬೇಯಿಸುವಾಗ ಸ್ಟವ್ ಪಕ್ಕ ಸಣ್ಣ ಬೌಲ್ ನಲ್ಲಿ ಬಿಳಿ ವಿನಿಗರ್ ಇಡಿ. ವಿನಿಗರ್ ಮೀನಿನ ವಾಸನೆಯನ್ನು ಹೀರಿ ತಾಜಾ ಪರಿಮಳ ಬೀರುತ್ತದೆ.

* ನಿಂಬೆ ಹಣ್ಣಿನ ರಸ ಕೂಡಾ ಮೀನಿನ ವಾಸನೆ ನಿವಾರಿಸುತ್ತದೆ. ಒಂದು ಕಪ್ ನೀರಿಗೆ ಸ್ವಲ್ಪ ನಿಂಬೆ ರಸ ಹಾಕಿ ಅರ್ಧ ಗಂಟೆ ಕುದಿಸಿ. ಇದರ ಪರಿಮಳ ಮೀನಿನ ವಾಸನೆಯನ್ನು ಹೋಗಲಾಡಿಸುತ್ತದೆ.

* ಮೀನು ಫ್ರೈ ಮಾಡುವ ಮೊದಲು ಸೇಬಿನ ತೆಳ್ಳನೆಯ ಸ್ಲೈಸ್ ಗಳಿಂದ ಫ್ರೈಯಿಂಗ್ ಪ್ಯಾನನ್ನು ಮೃದುವಾಗಿ ಉಜ್ಜಿ. ಇದರಿಂದ ಮೀನಿನ ವಾಸನೆ ಕಡಿಮೆಯಾಗುತ್ತದೆ.

* ಖಾದ್ಯ ಮಾಡಿದ ಬಳಿಕ ಕಿತ್ತಳೆ ಸಿಪ್ಪೆ ಅಥವಾ ನಿಂಬೆ ಹಣ್ಣಿನ ಸಿಪ್ಪೆಯನ್ನು ನೀರಿಗೆ ಹಾಕಿ ಕುದಿಸಿದರೂ ದುರ್ನಾತ ದೂರವಾಗುತ್ತದೆ.

* ಅಡುಗೆ ಮನೆಯಲ್ಲಿ ಮೀನಿನ ವಾಸನೆ ಬರುತ್ತಿದ್ದರೆ ಒಂದು ಬೌಲ್ ಕುದಿಯುವ ನೀರಿಗೆ ಒಂದು ತುಂಡು ಚಕ್ಕೆ ಹಾಕಿ. ಇದರಿಂದ ಉತ್ತಮ ಪರಿಮಳ ಹೊರ ಹೊಮ್ಮುತ್ತದೆ.

* ಸಾಧ್ಯವಾದಷ್ಟು ತಾಜಾ ಮೀನುಗಳನ್ನೇ ತನ್ನಿ. ಮೀನು ಫ್ರೆಶ್ ಆಗಿದ್ದಷ್ಟು ವಾಸನೆ ಕಡಿಮೆಯಿರುತ್ತದೆ.

Edited By : Nirmala Aralikatti
PublicNext

PublicNext

01/03/2021 01:45 pm

Cinque Terre

45.4 K

Cinque Terre

0