ಬೇಕಾಗುವ ಸಾಮಾಗ್ರಿಗಳು
ಎಲೆಕೋಸು – 1/2
ಈರುಳ್ಳಿ – 1
ಕಡಲೆ ಹಿಟ್ಟು – 2 ಕಪ್
ಅಕ್ಕಿ ಹಿಟ್ಟು – 1 ಕಪ್
ಪುದೀನಾ ಸ್ವಲ್ಪ
ಕೊತ್ತಂಬರಿ ಸೊಪ್ಪು ಸ್ವಲ್ಪ
ಹಸಿಮೆಣಸಿನಕಾಯಿ 4-5
ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ ಕರಿಯಲು
ಮಾಡುವ ವಿಧಾನ
ಎಲೆಕೋಸು ಮತ್ತು ಈರುಳ್ಳಿಯನ್ನು ಸಣ್ಣದಾಗಿ ಹೆಚ್ಚಿಕೊಂಡು ಒಂದು ಪಾತ್ರೆಗೆ ಹಾಕಿ. ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಕೋಸಿಗೆ ಹಿಡಿಯುವಷ್ಟು ಕಡಲೆಹಿಟ್ಟು, ಸ್ವಲ್ಪ ಅಕ್ಕಿ ಹಿಟ್ಟು, ಹೆಚ್ಚಿದ ಮೆಣಸಿನಕಾಯಿ, ಪುದೀನಾ, ಕೊತ್ತಂಬರಿ ಸೊಪ್ಪು ಎಲ್ಲವನ್ನೂ ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ನಂತರ ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೂ ಕರೆದರೆ ಕ್ಯಾಬೇಜ್ ಪಕೋಡ ಸಿದ್ಧವಾಗುತ್ತದೆ.
PublicNext
16/02/2021 04:22 pm