ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೈಸರ್ಗಿಕ ಹೇರ್ ಡೈ…!

ಕಪ್ಪಗಿನ ಕೂದಲು ಅಂದ್ರೆ ಯಾರಿಗೆ ಇಷ್ಟ ಇಲ್ಲಾ ಹೇಳಿ ಇತ್ತೀಚಿನ ದಿನಗಳಲ್ಲಿ ಕಪ್ಪು ಕೂದಲಿಗಾಗಿ ಜನ ಎಲ್ಲಿಲ್ಲದ ಸರ್ಕಸ್ ಮಾಡುತ್ತಾರೆ ಆದರೆ ಮನೆಯಲ್ಲಿಯೇ ಸುಲಭವಾಗಿ ಕಪ್ಪು ಕೂದಲು ನಿಮ್ಮದಾಗಿಸಿಕೊಳ್ಳಿ.. ಯಾವುದಾದರೂ ಕಾರ್ಯಕ್ರಮಕ್ಕೆ ಚೆನ್ನಾಗಿ ಹೇರ್ ಸ್ಟೈಲ್ ಮಾಡಿಕೊಳ್ಳಬೇಕು ಎಂದುಕೊಳ್ಳುವಾಗ ಈ ಬಿಳಿ ಕೂದಲು ಒಂದು ರೀತಿ ನಿರಾಶೆ ಉಂಟು ಮಾಡುತ್ತದೆ. ಕೆಮಿಕಲ್ ಯುಕ್ತ ಹೇರ್ ಡೈ ಮಾಡಿಕೊಳ್ಳಲು ಇಷ್ಟಪಡದವರು ಒಮ್ಮೆ ಈ ಹೇರ್ ಡೈ ಮನೆಯಲ್ಲಿ ಟ್ರೈ ಮಾಡಿ.

ಇದಕ್ಕೆ ಬೇಕಾಗಿರುವುದು ಮೆಹಂದಿ ಹಾಗೂ ಇಂಡಿಗೋ ಪೌಡರ್. ಇದು ಆನ್ ಲೈನ್ ಹಾಗೂ ಕೆಲವು ಶಾಪ್ ಗಳಲ್ಲೂ ಲಭ್ಯವಿದೆ.

ಮೊದಲಿಗೆ ಒಂದು ಬೌಲ್ ಗೆ 4 ಚಮಚ ಮೆಹಂದಿ ಪೌಡರ್ ಹಾಕಿ ಅದಕ್ಕೆ ಟೀ ಡಿಕಾಕ್ಷನ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ರಾತ್ರಿಯಿಡಿ ಹಾಗೇ ಇಡಿ.

ಬೆಳಿಗ್ಗೆ ಇದನ್ನು ತಲೆಗೆ ಹಚ್ಚಿಕೊಂಡು ಶವರ್ ಕ್ಯಾಪ್ ಹಾಕಿಕೊಳ್ಳಿ ಇಲ್ಲದಿದ್ದರೆ ಯಾವುದಾದರೂ ಪ್ಲಾಸ್ಟಿಕ್ ಕವರ್ ಅನ್ನು ತಲೆಗೆ ಹಾಕಿಕೊಳ್ಳಿ. 3 ಗಂಟೆ ಬಿಟ್ಟು ಸ್ನಾನ ಮಾಡಿ. ಶಾಂಪೂ ಬಳಸಬೇಡಿ. ಮಾರನೇ ದಿನ ಒಂದು ಬೌಲ್ ಗೆ 4 ಚಮಚ ಇಂಡಿಗೂ ಪೌಡರ್ ಹಾಕಿ ಅದಕ್ಕೆ ತುಸು ಉಗುರುಬೆಚ್ಚಗಿನ ನೀರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಅದೇ ಕೂಡಲೇ ನಿಮ್ಮ ತಲೆಗೆ ಹಚ್ಚಿಕೊಳ್ಳಿ. 2 ಗಂಟೆ ಬಿಟ್ಟು ತಲೆ ಸ್ನಾನ ಮಾಡಿ. ಇದರಿಂದ ಕೂದಲು ಕಪ್ಪು ಆಗುತ್ತದೆ.

Edited By : Nirmala Aralikatti
PublicNext

PublicNext

15/02/2021 06:28 pm

Cinque Terre

17.81 K

Cinque Terre

0