ಬೇಕಾಗುವ ಸಾಮಗ್ರಿಗಳು:
3 ಕ್ಯಾರಟ್, 1 ಗೆಣಸು, 2 ಕೆಂಪು ಮೆಣಸು, ನೆಲ್ಲಿಕಾಯಿ ಗಾತ್ರದ ಹುಣಸೆಹಣ್ಣು, 2 ಸ್ಪೂನ್ ಎಣ್ಣೆ, 1 ಸ್ಪೂನ್ ಸಾಸಿವೆ, ಸ್ವಲ್ಪ ಇಂಗು, 1 ಈರುಳ್ಳಿ, 5-6 ಎಸಳು ಬೆಳ್ಳುಳ್ಳಿ, 1 ಇಂಚು ಶುಂಠಿ, 2 ಲೋಟ ಅಕ್ಕಿ, ತೆಂಗಿನಕಾಯಿ ತುರಿ ,1/2 ಸ್ಪೂನ್ ಜೀರಿಗೆ ಪುಡಿ, ಚಿಟಿಕೆ ಅರಶಿನಪುಡಿ, 1 ಸ್ಪೂನ್ ಧನಿಯಾ ಪುಡಿ,2 ಸ್ಪೂನ್ ತುಪ್ಪ, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ :
ಮೊದಲಿಗೆ ಕ್ಯಾರೆಟ್, ಗೆಣಸಿನ ಸಿಪ್ಪೆ ತೆಗೆಯಿರಿ. ನಂತರ ಕತ್ತರಿಸಿಕೊಂಡು ಮಿಕ್ಸಿ ಜಾರಿಗೆ ಹಾಕಿ ಅದಕ್ಕೆ ಕೆಂಪು ಮೆಣಸು, ಹುಣಸೆಹಣ್ಣಿನ ರಸ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಅನಂತರ ಅದಕ್ಕೆ ನೀರು ಹಾಕಿ ಚೆನ್ನಾಗಿ ಕಿವುಚಿ ಸೋಸಿಕೊಳ್ಳಿ. ಆನಂತರ ಕುಕ್ಕರ್ ಪ್ಯಾನ್ ಗೆ ಎಣ್ಣೆ ಹಾಕಿ ಅದು ಕಾದ ಮೇಲೆ ಸಾಸಿವೆ ಹಾಕಿ ಅದು ಸಿಡಿದ ಮೇಲೆ ಬೆಳ್ಳುಳ್ಳಿ ಮತ್ತು ಈರುಳ್ಳಿ ಹಾಕಿ ಅದು ಕಂದು ಬಣ್ಣ ಬಂದ ಮೇಲೆ ಶುಂಠಿ, ಇಂಗು ಸೇರಿಸಿ.
ನಂತರ ಅಕ್ಕಿಯನ್ನು ತೊಳೆದು ಹಾಕಿ ಎರಡು ನಿಮಿಷ ಮಿಕ್ಸ್ ಮಾಡಿ ನಂತರ ಸೋಸಿದ ಕ್ಯಾರೆಟ್, ಗೆಣಸು, ಹುಣಸೆಹಣ್ಣಿನ ರಸ, ಅರಶಿನ ಪುಡಿ, ಧನಿಯಾ ಪುಡಿ, ಜೀರಿಗೆ ಪುಡಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕಲಸಿ ತೆಂಗಿನಕಾಯಿ ತುರಿ ಹಾಕಿ ಕುಕ್ಕರಿನ ಮುಚ್ಚುಳ ಮುಚ್ಚಿ 2 ವಿಷಲ್ ಕೂಗಿಸಿ ಅದು ತಣಿದ ನಂತರ ತುಪ್ಪ ಹಾಕಿ ನಿಧಾನಕ್ಕೆ ಒಮ್ಮೆ ಮಿಕ್ಸ್ ಮಾಡಿದರೆ ರುಚಿ, ರುಚಿಯಾದ ಕ್ಯಾರೆಟ್, ಗೆಣಸಿನ ರಸದ ಮಸಾಲೆಬಾತ್ ರೆಡಿ.
PublicNext
15/02/2021 04:37 pm