ಸಾಮಾನ್ಯವಾಗಿ ಚಾಟ್ ಸ್ಟ್ರೀಟ್ ಗಳಲ್ಲಿ ಲಭ್ಯವಿರೋ ಭೇಲ್ ಪುರಿ ಸ್ಯಾಂಡ್ವಿಚ್ ಮನೆಯಲ್ಲಿಯೇ ತಯಾರಿಸಬಹುದು.
ಬೇಕಾಗುವ ಸಾಮಗ್ರಿಗಳು: ಮಂಡಕ್ಕಿ ನೂರು ಗ್ರಾಂ, ಈರುಳ್ಳಿ, ಟೊಮ್ಯಾಟೊ (ಚಿಕ್ಕದಾಗಿ ಹೆಚ್ಚಿದ್ದು), ಆಲೂಗಡ್ಡೆ (ಬೇಯಿಸಿ, ಚಿಕ್ಕದಾಗಿ ಹೆಚ್ಚಿದ್ದು), ತುರಿದ ಕ್ಯಾರೆಟ್, ಪುದೀನಾ ಚಟ್ನಿ, ಉಪ್ಪು, ನಿಂಬೆರಸ, ಸೇವ್ ಪುರಿ, ಕೊತ್ತಂಬರಿ ಸೊಪ್ಪು, ಸ್ಯಾಂಡ್ವಿಚ್ ಬ್ರೆಡ್.
ಪುದೀನಾ ಚಟ್ನಿ ತಯಾರಿಸಲು : ಒಂದು ಕಟ್ಟು ಪುದೀನಾ, ಒಂದು ಕಟ್ಟು ಕೊತ್ತಂಬರಿ ಸೊಪ್ಪು, ಹಸಿಮೆಣಸನ್ನು ನಯವಾಗಿ ಮಿಕ್ಸಿಯಲ್ಲಿ ಅರೆಯಿರಿ. ಅರೆಯುವಾಗ ಕೊಂಚ ನೀರು ಮತ್ತು ಉಪ್ಪನ್ನು ಸೇರಿಸಿ. ಚಟ್ನಿ ತಯಾರಿಸಿದ ಬಳಿಕ ಬದಿಗೆ ತೆಗೆದಿಡಿ. ಬ್ರೆಡ್ ಪೀಸ್ ಗೆ ಸವರಲು ಈ ಚಟ್ನಿಯನ್ನು ಬಳಸಬೇಕು.
ಮಾಡುವ ವಿಧಾನ : ಒಂದು ಪಾತ್ರೆಯಲ್ಲಿ ಈರುಳ್ಳಿ, ಆಲೂಗಡ್ಡೆ, ಟೊಮ್ಯಾಟೋ, ಕ್ಯಾರೆಟ್ ಮತ್ತು ಮಂಡಕ್ಕಿ ಸೇರಿಸಿ ಚೆನ್ನಾಗಿ ಕಲಸಿ. ಈ ಪಾತ್ರೆಗೆ ಒಂದು ದೊಡ್ಡ ಚಮಚ ಪುದೀನಾ ಚಟ್ನಿ, ನಿಂಬೆರಸ, ಉಪ್ಪು ಸೇರಿಸಿ ಚಮಚ ಬಳಸಿ ಕಲಸಿ. ಇದಕ್ಕೆ ಸೇವ್ ಪುರಿ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಕಲಸಿ. ಈಗ ಸಾಂಡ್ವಿಚ್ ತಯಾರಿಸಲು ಬ್ರೆಡ್ ನ ಒಂದು ಭಾಗಕ್ಕೆ (ಅಥವಾ ಬನ್ ನ ಒಳಭಾಗ) ಕೊಂಚ ಚಟ್ನಿ ಸವರಿ. ಸವರಿದ ಹೋಳಿನ ಮೇಲೆ ಭೇಲ್ ಪುರಿಯನ್ನು ದಪ್ಪನಾಗಿ ಹರಡಿ. ಈಗ ಇನ್ನೊಂದು ಬ್ರೆಡ್ ನ್ನು ಇದರ ಮೇಲಿರಿಸಿ. ರುಚಿಯಾದ ಭೇಲ್ ಪುರಿ ಸ್ಯಾಂಡ್ವಿಚ್ ಈಗ ತಯಾರಾಗಿದೆ. ಇದನ್ನು ಗ್ರೀನ್ ಚಟ್ನಿಯೊಂದಿಗೆ ಆಸ್ವಾದಿಸಿ.
PublicNext
08/02/2021 11:49 am