ಮನೆಯಲ್ಲಿ ಮಕ್ಕಳಿಗೆ ಸುಲಭವಾಗಿ ಸ್ಟ್ರಾಬೆರಿ ಜಾಮ್ ಮಾಡಿ ಕೊಡಿ.
ಬೇಕಾಗುವ ಸಾಮಗ್ರಿಗಳು:
2 ಕಪ್ – ಕತ್ತರಿಸಿದ ಸ್ಟ್ರಾಬೆರಿ, 1 ಕಪ್ – ಪುಡಿ ಮಾಡಿದ ಸಕ್ಕರೆ, 2 ಟೇಬಲ್ ಸ್ಪೂನ್ – ಲಿಂಬೆಹಣ್ಣಿನ ರಸ.
ಮಾಡುವ ವಿಧಾನ:
ಸ್ಟ್ರಾಬೆರಿಯನ್ನು ಚೆನ್ನಾಗಿ ತೊಳೆದು ಅದರ ಮೇಲುಗಡೆ ಹಸಿರು ಭಾಗವನ್ನು ತೆಗೆಯಿರಿ. ಉಳಿದ ಭಾಗವನ್ನು ಚೆನ್ನಾಗಿ ಒರೆಸಿ ಕತ್ತರಿಸಿಕೊಳ್ಳಿ. ನಂತರ ಇದನ್ನು ಒಂದು ದೊಡ್ಡ ಬೌಲ್ ಗೆ ಹಾಕಿಕೊಂಡು ಅದಕ್ಕೆ ಸಕ್ಕರೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ 30 ನಿಮಿಷಗಳ ಕಾಲ ಒಂದು ಮುಚ್ಚಳ ಮುಚ್ಚಿ ಇಡಿ.
ನಂತರ ಇದಕ್ಕೆ ಲಿಂಬೆಹಣ್ಣಿನ ರಸ ಸೇರಿಸಿ ಒಂದು ಸಾಸ್ ಪ್ಯಾನ್ ಗೆ ಹಾಕಿ ಗ್ಯಾಸ್ ಮೇಲೆ ಇಡಿ. ಸಣ್ಣ ಉರಿಯಲ್ಲಿ ಇದನ್ನು ಕುದಿಯಲು ಬಿಡಿ. ನಂತರ ಸೌಟಿನ ಸಹಾಯದಿಂದ ಚಿಕ್ಕ ಚಿಕ್ಕ ತುಂಡುಗಳನ್ನು ಮ್ಯಾಷ್ ಮಾಡಿ. ಈ ಮಿಶ್ರಣ ದಪ್ಪಗಾಗುತ್ತಿದ್ದಂತೆ ತಳ ಬಿಡುವುದಕ್ಕೆ ಶುರುವಾಗುತ್ತದೆ. ಆಗ ಗ್ಯಾಸ್ ಆಫ್ ಮಾಡಿ ತಣ್ಣಗಾಗಲು ಬಿಡಿ. ಗ್ಲಾಸ್ ಜಾರ್ ನಲ್ಲಿ ತುಂಬಿಸಿ ಫ್ರಿಡ್ಜ್ ನಲ್ಲಿಡಿ.
PublicNext
02/02/2021 05:00 pm