ಬೇಕಾಗುವ ಸಾಮಗ್ರಿ : ಬೇಯಿಸಿದ ಮೊಟ್ಟೆ 5, ಈರುಳ್ಳಿ 3, ಕೊತ್ತಂಬರಿ ಸೊಪ್ಪು 1/2 ಕಪ್, ಟೊಮ್ಯಾಟೋ 1, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಎಗ್ ಮಸಾಲಾ , ಧನಿಯಾ ಪುಡಿ, ಕಾರದಪುಡಿ, ಅರಿಶಿಣ, ಕಪ್ಪು ಮೆಣಸಿನ ಪುಡಿ ತಲಾ 1/2 ಚಮಚ, ಅಡುಗೆ ಎಣ್ಣೆ 2 ಚಮಚ ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ : ಮೊದಲು ನೀರಿಗೆ ಉಪ್ಪನ್ನ ಹಾಕಿ ಮೊಟ್ಟೆಯನ್ನ ಬೇಯಿಸಿಕೊಳ್ಳಿ. ಮೊಟ್ಟೆ ತಣ್ಣಗಾದ ಮೇಲೆ ಸಣ್ಣದಾಗಿ ಕತ್ತರಿಸಿಕೊಳ್ಳಿ. ಇದೀಗ ಇನ್ನೊಂದು ಪಾತ್ರೆಯಲ್ಲಿ ಅಡುಗೆ ಎಣ್ಣೆಯನ್ನ ಹಾಕಿಕೊಳ್ಳಿ. ಇದಕ್ಕೆ ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅರಿಶಿಣ ಹಾಕಿ ಈರುಳ್ಳಿ ಹೊಂಬಣ್ಣ ಬರುವವರೆಗೂ ಹುರಿಯಿರಿ. ಈ ಮಿಶ್ರಣಕ್ಕೆ ಟೊಮ್ಯಾಟೋ, ಕೊತ್ತಂಬರಿ ಸೊಪ್ಪು ಹಾಗೂ ಎಲ್ಲಾ ಮಸಾಲೆ ಪದಾರ್ಥಗಳನ್ನ ಬೆರೆಸಿ. ಹಸಿ ವಾಸನೆ ಸಂಪೂರ್ಣ ಹೋಗುವವರೆಗೆ ಹುರಿಯಿರಿ ನಂತರ ಬೇಯಿಸಿಕೊಂಡ ಮೊಟ್ಟೆ ಹಾಕಿ ಕದಡಿದರೆ ಮೊಟ್ಟೆ ಪಲ್ಯ ರೆಡಿ..
PublicNext
28/01/2021 03:29 pm