ದೋಸೆ ಅಥವಾ ಇಡ್ಲಿಯನ್ನು ಚಟ್ನಿ ಜೊತೆ ತಿಂದು ಬೋರ್ ಹಿಡಿದಿದ್ದರೆ, ಈ ಸ್ಟೆಷಲ್ ಚಟ್ನಿಯನ್ನು ಟ್ರೈ ಮಾಡಿ.
ಖಾರ ಖಾರವಾಗಿ ನಾಲಿಗೆಗೆ ಚುರುಕು ಮುಟ್ಟಿಸುವಂತಹ ಈ ಚಟ್ನಿಯನ್ನು ಮಾಡುವುದು ಸುಲಭ. ಹೃದಯದ ಸ್ವಾಸ್ಥ್ಯಕ್ಕೆ ಪೂರಕವಾಗಿರುವ ರುಚಿಕರವಾದ ಈರುಳ್ಳಿ ಚಟ್ನಿ ಮಾಡೋದು ಹೇಗೆ ಎಂದು ತಿಳಿದುಕೊಳ್ಳೋಣ.
ಬೇಕಾಗುವ ಸಾಮಾಗ್ರಿಗಳು
ಕತ್ತರಿಸಿದ ಈರುಳ್ಳಿ 1/2 ಕಪ್
ತೆಂಗಿನ ಕಾಯಿ ತುರಿ 1 ಕಪ್
ಒಣಮೆಣಸಿನಕಾಯಿ 4-5
ಕತ್ತರಿಸಿದ ಶುಂಠಿ 1/4 ಚಮಚ
ಕರಿಬೇವಿನ ಎಲೆಗಳು 7-8
ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ 4 ಚಮಚ
ಸಾಸಿವೆ 1 ಚಮಚ
ಇಂಗು 1/4 ಚಮಚ
ಮಾಡುವ ವಿಧಾನ
ಮೊದಲು ಕರಿಬೇವಿನ ಎಲೆಗಳು ಹಾಗೂ ಒಣ ಮೆಣಸಿನ ಕಾಯಿಯನ್ನು ಸ್ವಲ್ಪ ಎಣ್ಣೆ ಹಾಕಿ ಹುರಿದುಕೊಳ್ಳಬೇಕು. ಹುರಿದ ಮಿಶ್ರಣವನ್ನು ಮಿಕ್ಸಿಗೆ ಹಾಕಿ ಕತ್ತರಿಸಿದ ಈರುಳ್ಳಿ, ತೆಂಗಿನಕಾಯಿತುರಿ, ಶುಂಠಿ ಹಾಗೂ ಉಪ್ಪು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು.
ಅರೆದ ಈರುಳ್ಳಿ ಚಟ್ನಿಗೆ ಸಾಸಿವೆ ಮತ್ತು ಇಂಗಿನ ಒಗ್ಗರಣೆ ಕೊಡಬೇಕು. ರುಚಿಯಾದ ಈರುಳ್ಳಿ ಚಟ್ನಿ ಚಪಾತಿ, ಅನ್ನ ಇಲ್ಲವೇ ದೋಸೆಯೊಂದಿಗೆ ತಿನ್ನಲು ಬಲು ರುಚಿ.
PublicNext
06/01/2021 07:36 am