ಬೇಕಾಗುವ ಸಾಮಗ್ರಿ: ಒಂದು ಕಟ್ಟು ಪಾಲಕ್ ಸೊಪ್ಪು, 3 ಕಪ್ ನೀರು, ಒಂದು ಇಂಚು ಶುಂಠಿ, ಒಂದು ಹಸಿಮೆಣಸಿನಕಾಯಿ.
ಹಿಟ್ಟು ತಯಾರಿಸಲು 2 ಕಪ್ ಗೋಧಿ ಹಿಟ್ಟು, ಅರ್ಧ ಚಮಚ ಅಜ್ವೈನ್, ರುಚಿಗೆ ತಕ್ಕಷ್ಟು ಉಪ್ಪು, 2 ಚಮಚ ಎಣ್ಣೆ, ಅಗತ್ಯವಿದ್ದಷ್ಟು ನೀರು.
ಪರೋಟಾ ಲಟ್ಟಿಸಲು ಅರ್ಧ ಕಪ್ ಗೋಧಿ ಹಿಟ್ಟು, ತುಪ್ಪ.
ಮಾಡುವ ವಿಧಾನ: ಕುದಿಯುವ ನೀರಿಗೆ ಪಾಲಕ್ ಸೊಪ್ಪು ಹಾಕಿ ಒಂದು ನಿಮಿಷ ಬೇಯಿಸಿ.
ನಂತರ ಸೊಪ್ಪನ್ನು ಸೋಸಿಕೊಂಡು ಅದಕ್ಕೆ ಶುಂಠಿ, ಹಸಿಮೆಣಸಿನಕಾಯಿ ಹಾಕಿ ಪೇಸ್ಟ್ ಮಾಡಿಕೊಳ್ಳಿ.
ಅದಕ್ಕೆ ಗೋಧಿ ಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, ಎಣ್ಣೆ, ನೀರು ಹಾಕಿ ಕಲೆಸಿಕೊಂಡು ಮೃದುವಾದ ಹಿಟ್ಟನ್ನು ತಯಾರಿಸಿ.
ರೆಡಿಯಾದ ಹಿಟ್ಟಿಗೆ ಮೇಲಿಂದ ಸ್ವಲ್ಪ ಎಣ್ಣೆ ಸವರಿ ಒದ್ದೆ ಬಟ್ಟೆಯನ್ನು ಮುಚ್ಚಿ ಅರ್ಧ ಗಂಟೆ ಹಾಗೇ ಬಿಡಿ.
ನಂತರ ಅದನ್ನು ಉಂಡೆಗಳನ್ನಾಗಿ ಮಾಡಿಕೊಳ್ಳಿ. ಚಪಾತಿ ಮಣೆಯ ಮೇಲೆ ಸ್ವಲ್ಪ ಹುಡಿ ಹಿಟ್ಟನ್ನು ಹಾಕಿಕೊಂಡು ತೆಳುವಾಗಿ ಲಟ್ಟಿಸಿ. ಕಾದ ತವಾದ ಮೇಲೆ ಹಾಕಿ ರೋಸ್ಟ್ ಮಾಡಿ.
ತುಪ್ಪ ಹಾಕಿ ಹೊಂಬಣ್ಣಕ್ಕೆ ಬರುವವರೆಗೂ ಬೇಯಿಸಿದರೆ ಪಾಲಕ್ ಸೊಪ್ಪಿನ ಪರೋಟಾ ರೆಡಿ.
ಮೊಸರು ಹಾಗೂ ಉಪ್ಪಿನಕಾಯಿ ಜೊತೆ ಬಿಸಿಬಿಸಿಯಾಗಿ ತಿನ್ನಿ.
PublicNext
31/12/2020 02:02 pm