ಕೂದಲು ಉದುರಿವುದು ಎಲ್ಲಾ ಹೆಣ್ಣುಮಕ್ಕಳ ದೊಡ್ಡ ಸಮಸ್ಯೆ. ಕೂದಲು ಬಾಚಿದೊಡನೆ ಕೂದಲ ರಾಶಿ ಉದುರುವುದು ತುಂಬಾ ನೋವಿನ ಸಂಗತಿ. ಈ ವಿಷಯದ ಬಗ್ಗೆ ಸಾಕಷ್ಟು ಬಾರಿ ಯೋಚನೆ ಮಾಡಿರುತ್ತೆವೆ. ಕೂಲಿನ ಎಲ್ಲಾ ಸಮಸ್ಯೆಗೆ ಪರಿಹಾರವನ್ನು ಇಂದು ಈ ವಿಷಯಗಳನ್ನು ಓದಿ ತಿಳಿದುಕೊಂಡು, ಅದರಂತೆ ಮಾಡಿ ಪ್ರಯೋಜನ ಪಡೆದುಕೊಳ್ಳಿ
ಒಂದು ಬಟ್ಟಲಿಗೆ ಎರಡು ಮೊಟ್ಟೆಗಳನ್ನು ಒಡೆದು ಹಾಕಿ ಇದಕ್ಕೆ ಕೊಬ್ಬರಿ ಎಣ್ಣೆ ಸೇರಿಸಿ, 1 2 ಚಮಚ ಗ್ಲಿಸರಿನ್ ಅನ್ನು ಹಾಕಿ ಎಲ್ಲವನ್ನೂ ಕಲಿಸಿ ಬುರುಡೆ ಕೂದಲಿಗೆ ಹಚ್ಚಿ ಒಂದು ಗಂಟೆಯ ನಂತರ ನಿಂಬೆ ರಸದೊಂದಿಗೆ ತಲೆಗೆ ಸ್ನಾನ ಮಾಡಿದರೆ ಕೂದಲು ಕಾಂತಿಯುತವಾಗಿ ಬೆಳೆಯುತ್ತದೆ
ಮಂದಾರ ಹೂವಿನ ಗಿಡದ ಎಲೆಯನ್ನು ತಲೆಗೆ ಹಚ್ಚಿ ಸ್ನಾನ ಮಾಡಿದರೆ ತುಂಬಾ ಒಳ್ಳೆಯದು ಕೂದಲು ಉದುರುವುದು ನೆರೆ ಬರುವುದು ಹೋಗುತ್ತದೆ ಮತ್ತು ಕೂದಲು ಕಪ್ಪಾಗಿ ಉದ್ದವಾಗಿ ಬೆಳೆಯುತ್ತದೆ ಮಂದಾರ ಎಲೆಯಿಂದ ತಲೆಗೆ ಸ್ನಾನ ಮಾಡಿದರೆ ಮೆದುಳಿಗೂ ಒಳ್ಳೆಯದು, ತಲೆ ಕೂದಲು ಸೊಂಪಾಗಿ ಬೆಳೆಯುತ್ತದೆ.
ಬಳಸದೆ ಒಣಗಿದ ಕರಿಬೇವು ನೆಲ್ಲಿಕಾಯಿ ಮುಂತಾದುವುಗಳನ್ನು ಎಸೆಯದೆ ಬಿಸಿಲಿನಲ್ಲಿ ಒಣಗಿಸಿ ಪುಡಿಮಾಡಿ ಕೊಬ್ಬರಿ ಎಣ್ಣೆಯಲ್ಲಿ ಹಾಕಿ ಕಾಯಿಸಿ ಆರಿಸಿ ದಿನನಿತ್ಯ ಬಳಸಿ ಕೂದಲು ಸೊಂಪಾಗಿ ಬೆಳೆಯುತ್ತದೆ, ನಿಮ್ಮ ಕೂದಲಿಗೆ ಸ್ವಲ್ಪ ನಿಂಬೆ ಹಣ್ಣನ್ನು ಹಚ್ಚಿ ಅರ್ಧಗಂಟೆ ಹಚ್ಚಿ ತಿಕ್ಕಿ ಸ್ನಾನ ಮಾಡಿ ನಿಮ್ಮ ಕೂದಲು ಪಳಪಳನೆ ಹೊಳೆಯುತ್ತ ಹುಳುಸಾಗಿ ಸುಂದರವಾಗಿ ಕಾಣಿಸುತ್ತದೆ ಅಲ್ಲದೆ ಉದುರು ಉದುರಾಗಿರದೆ ಜಿಡ್ಡನ್ನು ತೊಲಗಿಸುತ್ತದೆ.
ಬೆಳ್ಳುಳ್ಳಿಯ ಹೊಟ್ಟನ್ನು ಸುಟ್ಟು ಬೂದಿಯನ್ನು ಆಲಿವ್ ಎಣ್ಣೆಯಲ್ಲಿ ಬೆರೆಸಿ ಪ್ರತಿನಿತ್ಯ ಹಚ್ಚಿಕೊಂಡರೆ ಕೂದಲು ಉದುರುವುದಿಲ್ಲ, ಮತ್ತು ಕೂದಲು ವಿಶಾಲವಾಗಿ ಬೆಳೆಯುತ್ತದೆ ಹಾಗೂ ಕೂದಲು ಗುಂಗುರಾಗಿ ಅಂದವಾಗಿ ಕಾಣುತ್ತದೆ.
ಜೇನುತುಪ್ಪಕ್ಕೆ ಅದರ ಮೂರು ಪಟ್ಟು ಕೊಬ್ಬರಿಎಣ್ಣೆ ಬೆರೆಸಿ ಈ ಮಿಶ್ರಣವನ್ನು ಒಂದು ದಿನ ಹಾಗೆಯೇ ಇಡಿ, ಮಾರನೆಯ ದಿನ ತಲೆ ತೊಳೆಯುವ ಮುಂಚೆ ಇದನ್ನು ಚೆನ್ನಾಗಿ ಹಚ್ಚಿಕೊಳ್ಳಿ, ಒಂದು ಅಥವಾ ಎರಡು ಗಂಟೆಗಳ ನಂತರ ಸೀಗೇಕಾಯಿಯಿಂದ ತಲೆಗೆ ಸ್ನಾನ ಮಾಡಿ.
ಹೀಗೆ ತಲೆಕೂದಲಿನ ಆರೈಕೆ ಮಾಡಿ. ತಲೆಕೂದಲಿನ ಸಮಸ್ಯೆ ನಿವಾರಣೆ ಆಗುತ್ತದೆ.
PublicNext
24/09/2020 07:26 pm