ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಲಭವಾಗಿ ರುಚಿಯಾಗಿ ಮನೆಯಲ್ಲೇ ಮಾಡಿ ಎಗ್ ಪರೋಟ

ಬೇಕಾಗುವ ಪದಾರ್ಥಗಳು

• ಎಣ್ಣೆ- ಅಗತ್ಯಕ್ಕನುಗುಣವಾಗಿ

• ಈರುಳ್ಳಿ- ಸಣ್ಣಗೆ ಹೆಚ್ಚಿದ್ದು ಮುಕ್ಕಾಲು ಬಟ್ಟಲು

• ಬೆಳ್ಳುಳ್ಳಿ- ಸಣ್ಣಗೆ ಹೆಚ್ಚಿದ್ದು 2 ಚಮಚ

• ಶುಂಠಿ- ಸಣ್ಣಗೆ ಹೆಚ್ಚಿದ್ದು 2 ಚಮಚ

• ಹಸಿಮೆಣಸಿನ ಕಾಯಿ- ಸಣ್ಣಗೆ ಹೆಚ್ಚಿದ್ದು 2-3

• ಅಚ್ಚ ಖಾರದ ಪುಡಿ- 1 ಚಮಚ

• ಅರಿಶಿನ ಪುಡಿ- ಕಾಲು ಚಮಚ

• ಮೊಟ್ಟೆ- 4

• ಟೊಮೆಟೋ- ಸಣ್ಣಗೆ ಹೆಚ್ಚಿದ್ದು ಮುಕ್ಕಾಲು ಬಟ್ಟಲು

• ಕೊತ್ತಂಬರಿ ಸೊಪ್ಪು- ಸಣ್ಣಗೆ ಹೆಚ್ಚಿದ್ದು ಸ್ವಲ್ಪ

• ಗೋದಿ ಹಿಟ್ಟು- 1 ಬಟ್ಟಲು

• ಮೈದಾ ಹಿಟ್ಟು- ಅರ್ಧ ಬಟ್ಟಲು

• ಉಪ್ಪು- ರುಚಿಗೆ ತಕ್ಕಷ್ಟು

ಮಾಡುವ ವಿಧಾನ...

• ಒಲೆಯ ಮೇಲೆ ಬಾಣಲೆ ಇಟ್ಟು 2-3 ಚಮಚ ಎಣ್ಣೆ ಹಾಕಿ. ಎಣ್ಣೆ ಕಾದ ನಂತರ ಅದಕ್ಕೆ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಹಸಿಮೆಣಸಿನ ಕಾಯಿ, ಅಚ್ಚ ಖಾರದ ಪುಡಿ, ಅರಿಶಿನ ಪುಡಿ ಹಾಕಿ ಕೆಂಪಗೆ ಹುರಿದುಕೊಳ್ಳಬೇಕು.

• ನಂತರ ಮೊಟ್ಟೆಗಳನ್ನು ಒಡೆದು ಹಾಕಬೇಕು, ಬಳಿಕ ಟೊಮೆಟೋ, ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕೆಂಪಗೆ ಹುರಿದುಕೊಳ್ಳಬೇಕು.

• ಪಾತ್ರೆಯೊಂದನ್ನು ತೆಗೆದುಕೊಂಡು ಗೋಧಿ, ಮೈದಾ ಹಿಟ್ಟು, ಉಪ್ಪು ಹಾಕಿ ಚೆನ್ನಾಗಿ ಕಲಸಿಕೊಳ್ಳಬೇಕು. ನಂತರ ನೀರು ಮತ್ತು ಎಣ್ಣೆ ಹಾಕಿ ಚಪಾತಿ ಹಿಟ್ಟನ್ನು ತಯಾರು ಮಾಡಿಕೊಳ್ಳಬೇಕು.

• ಹಿಟ್ಟನ್ನು ಚಪಾತಿಯಂತೆ ಒತ್ತಿ ಮಧ್ಯೆ ಈಗಾಗಲೇ ಮಾಡಿಕೊಂಡ ಮೊಟ್ಟೆ ಮಸಾಲೆಯನ್ನು ಮಧ್ಯೆ ಇಟ್ಟು, ಹೊರಗೆ ಬಾರದಂತೆ ಮುಚ್ಚಿ ಮತ್ತೆ ಪರೋಟ ರೀತಿಯಲ್ಲಿ ಲಟ್ಟಿಸಿ, ಎರಡೂ ಬದಿಯಲ್ಲೂ ಸುಟ್ಟರೆ, ರುಚಿಕರವಾದ ಎಗ್ ಪರೋಟ ಸವಿಯಲು ಸಿದ್ಧ.

Edited By : Nirmala Aralikatti
PublicNext

PublicNext

21/12/2020 12:48 pm

Cinque Terre

20.72 K

Cinque Terre

0