ಟೋನಿಂಗ್ ಎನ್ನುವುದು ಮೂರು ಹಂತದ ಮೂಲ ಚರ್ಮದ ಆರೈಕೆಯ ಭಾಗವಾಗಿದ್ದು, ಇದು ಕ್ಲೆನ್ಸಿಂಗ್, ಟೋನಿಂಗ್ ಮತ್ತು ಮಾಯಿಶ್ಚರೈಸಿಂಗ್ ಅನ್ನು ಒಳಗೊಂಡಿದೆ.
ಈ ಹಂತಗಳು ನಿಮಗೆ ಆರೋಗ್ಯಕರ ಮತ್ತು ಹೊಳಪಿನ ಚರ್ಮ ನೀಡಲು ನೆರವಾಗುತ್ತದೆ. ಉತ್ತಮವಾದ ಟೋನರ್ ನಿಮ್ಮ ಚರ್ಮದ ಪಿಹೆಚ್ ಮಟ್ಟ ನಿರ್ವಹಿಸಿ, ನಿಮ್ಮ ಮುಖದ ರಂಧ್ರ ಕಡಿಮೆ ಮಾಡುತ್ತದೆ, ಹೆಚ್ಚುವರಿ ತೈಲ ತೆಗೆದು, ಕೆಂಪಾಗುವಿಕೆ ಮತ್ತು ಅಸಹನೀಯತೆಯನ್ನು ಕಡಿಮೆ ಮಾಡುತ್ತದೆ. ಇದು ನಿಮ್ಮ ಚರ್ಮಕ್ಕೆ ಹೊಳಪನ್ನು ನೀಡುತ್ತದೆ.
ಇಲ್ಲಿ ನೀವು ಮನೆಯಲ್ಲೇ ತಯಾರಿಸಬಹುದಾದ ಪ್ರಾಕೃತಿಕ ಟೋನರ್ ನೀಡಲಾಗಿದೆ. ಆದರೆ, ಅದಕ್ಕೂ ಮೊದಲು, ನೀವು ಅದನ್ನು ಯಾವಾಗ ಮತ್ತು ಹೇಗೆ ಬಳಸಬೇಕೆಂದು ತಿಳಿಯಬೇಕು.
ಟೋನರ್ ಹೇಗೆ ಬಳಸಬೇಕು?
ಮೊದಲ ಹಂತವೆಂದರೆ ಚರ್ಮವನ್ನು ನಿಮ್ಮ ಚರ್ಮಕ್ಕೆ ಹೊಂದುವ ಫೇಸ್ ವಾಶ್ ನಿಂದ ತೊಳೆಯಬೇಕು. ನಂತರ ಟೋನರ್ ಹಾಕಬೇಕು, ಸ್ವಲ್ಪ ಟೋನರ್ ಅನ್ನು ಹತ್ತಿಯ ಉಂಡೆಯ ಮೇಲೆ ಹಾಕಿ, ಅದನ್ನು ಚರ್ಮದ ಮೇಲೆ ಹಚ್ಚಬೇಕು.
ಅಲೋವೆರಾ ಮತ್ತು ರೋಸ್ ವಾಟರ್ ನಿಂದ ಮನೆಯಲ್ಲೇ ಸ್ಕಿನ್ ಟೋನರ್ ತಯಾರಿಸುವುದು
ಅಲೋವೆರಾ ಮತ್ತು ರೋಸ್ ವಾಟರ್ ನಿಮ್ಮ ಚರ್ಮಕ್ಕೆ ಅದ್ಭುತವಾಗಿದ್ದು, ಇದು ಶತಮಾನಗಳಿಂದ ಮೂಲಿಕೆ ಮನೆಮದ್ದಿನ ಭಾಗವಾಗಿದೆ.
ಅಲೋವೆರಾ ನಿಮ್ಮ ಚರ್ಮವನ್ನು ತೇವಗೊಳಿಸಿ, ಮೊಡವೆ, ಬಿಸಿಲಿನಿಂದ ಸುಟ್ಟ ಚರ್ಮ ಮತ್ತು ಚರ್ಮದ ಇತರ ಸಮಸ್ಯೆಗಳಿಗೆ ಚಿಕಿತ್ಸೆ ನೀಡುತ್ತದೆ.
ರೋಸ್ ವಾಟರ್, ಉರಿಯೂತ ನಿರೋಧಕ ಗುಣವನ್ನು ಹೊಂದಿದ್ದು, ಇದು ಚರ್ಮ ಕೆಂಪಾಗುವಿಕೆ ಮತ್ತು ಊದಿದಂತಿರುವುದನ್ನು ಕಡಿಮೆ ಮಾಡುತ್ತದೆ. ಇದು ಚರ್ಮವನ್ನು ನಯವಾಗಿಸುತ್ತದೆ.
ಈಗ ನಾವು ಈ ಅದ್ಭುತ ಪದಾರ್ಥಗಳನು ಬಳಸಿ ಸ್ಕಿನ್ ಟೋನರ್ ಹೇಗೆ ಸಿದ್ಧಪಡಿಸಬಹುದೆಂದು ನೋಡೋಣ.
ಅಲೋವೆರಾ ಮತ್ತು ರೋಸ್ ವಾಟರ್ ಟೋನರ್ ಸಿದ್ಧಪಡಿಸುವ ವಿಧಾನ ಅಲೋವೆರಾ ಎಲೆ ತೆಗೆದುಕೊಂಡು ಅದರ ಜೆಲ್ ಅನ್ನು ಬೌಲ್ ಗೆ ಹಾಕಿ. ಈಗ, ಸ್ವಲ್ಪ ತಾಜಾ ಗುಲಾಬಿ ದಳ ತೆಗೆದುಕೊಂಡು, ನೀರು ಸೇರಿಸಿ ಮೆತ್ತನೆಯ ಪೇಸ್ಟ್ ಮಾಡಿ.
ಈಗ ಜೆಲ್ ಅನ್ನು ರೋಸ್ ವಾಟರ್ ಗೆ ಸೇರಿಸಿ, ಮತ್ತೆ ಮಿಶ್ರಮಾಡಿ. ನೀವು ಮಿಶ್ರಣಕ್ಕೆ ಸ್ವಲ್ಪ ಎಸೆನ್ಷಿಯಲ್ ಆಯಿಲ್ ಸಹ ಸೇರಿಸಬಹುದು.
ಚೆನ್ನಾಗಿ ಮಿಶ್ರಮಾಡಿ, ಟೋನರ್ ನ ದ್ರವದಷ್ಟು ತೆಳ್ಳಗೆ ಮಾಡಿ. ಈಗ ನಿಮ್ಮ ಪ್ರಾಕೃತಿಕ ಟೋನರ್ ಸಿದ್ಧವಾಗಿದ್ದು, ನಿಮ್ಮ ಶುಷ್ಕತೆಯನ್ನು ನಿವಾರಿಸಿ ಆಕರ್ಷಕ ಚರ್ಮ ನೀಡುತ್ತದೆ.
ನೀವು ಈ ಟೋನರ್ ಅನ್ನು ತಾಜಾ ಆಗಿಡಲು ಫ್ರಿಡ್ಜ್ ನಲ್ಲಿಡಬಹುದು. ಇದನ್ನು ನಿಮ್ಮ ಮುಖ ಮತ್ತು ಕತ್ತಿಗೆ ನಿಯಮಿತವಾಗಿ ಹಚ್ಚುವ ಮೂಲಕ ಅದರ ಪ್ರಯೋಜನಗಳನ್ನು ಪಡೆಯಬಹುದು.
PublicNext
17/12/2020 12:46 pm