ಬೇಕಾಗುವ ಪದಾರ್ಥಗಳು
ಚಿಕನ್ - 1 ಕೆಜಿ
ನಿಂಬೆಹಣ್ಣಿನ ರಸ- 1 ಚಮಚ
ಉಪ್ಪು- 1 ಚಮಚ
ಅರಿಶಿನದ ಪುಡಿ- ಸ್ವಲ್ಪ
ಅಚ್ಛಖಾರದ ಪುಡಿ- 2 ಚಮಚ
ಎಣ್ಣೆ -3-4 ಚಮಚ
ಈರುಳ್ಳಿ- ಉದ್ದಕ್ಕೆ ಹೆಚ್ಚಿದ್ದು 1-2
ಶುಂಠಿ, ಬೆಳ್ಳುಳ್ಳಿ- ಸಣ್ಣಗೆ ಹೆಚ್ಚಿದ್ದು
ಟೊಮೆಟೋ- ಸಣ್ಣಗೆ ಹೆಚ್ಚಿದ್ದು 1
ದನಿಯಾ ಪುಡಿ - 1 ಚಮಚ
ಗರಂ ಮಸಾಲೆ ಪುಡಿ - 1 ಚಮಚ
ಮಾಡುವ ವಿಧಾನ...
ಮೊದಲಿಗೆ ಪಾತ್ರೆಯೊಂದನ್ನು ತೆಗೆದುಕೊಂಡು ಕೋಳಿ ಮಾಂಸವನ್ನು ಚೆನ್ನಾಗಿ ತೊಳೆದು, ಅದಕ್ಕೆ ನಿಂಬೆಹಣ್ಣಿನ ರಸ, ಉಪ್ಪು, ಅರಿಶಿನದ ಪುಡಿ, ಅಚ್ಚಖಾರದ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ 20 ನಿಮಿಷ ನೆನೆಯಲು ಬಿಡಬೇಕು.
ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಈರುಳ್ಳಿಯನ್ನು ಹಾಕಿ ಕೆಂಪಗೆ ಹುರಿದುಕೊಂಡು ನಂತರ ಪಕ್ಕಕ್ಕಿಟ್ಟುಕೊಳ್ಳಬೇಕು.
ನಂತರ ಬಾಣಲೆಯಲ್ಲಿಯೇ ಉಳಿದ ಎಣ್ಣೆಗೆ ಶುಂಠಿ, ಬೆಳ್ಳುಳ್ಳಿ ಹಾಕಿ ಕೆಂಪಗೆ ಹುರಿದುಕೊಂಡು ನಂತರ ಈಗಾಗಲೇ ನೆನೆಸಿದ ಮಾಂಸವನ್ನು ಹಾಕಿ 5 ನಿಮಿಷ ಬೇಯಲು ಬಿಡಬೇಕು. ನಂತರ ಇದಕ್ಕೆ ಟೊಮೆಟೋ, ದನಿಯಾ ಪುಡಿ, ಗರಂ ಮಸಾಲೆ ಪುಡಿ ಹಾಕಿ 15 ನಿಮಿಷ ಬೇಯಿಸಬೇಕು. ನಂತರ ಈಗಾಗಲೇ ಹುರಿದಿಟ್ಟುಕೊಂಡ ಈರುಳ್ಳಿಯನ್ನು ಹಾಕಿ 10 ನಿಮಿಷ ಬೇಯಿಸಿದರೆ, ರುಚಿಕರವಾದ ಮಸಾಲಾ ಫ್ರೈ ಚಿಕನ್ ಸವಿಯಲು ಸಿದ್ಧ.
PublicNext
13/12/2020 02:32 pm