ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಂಕುಳ ಕಪ್ಪು ಕಲೆ ನಿವಾರಣೆಗೆ ಹೀಗೆ ಮಾಡಿ

ತೋಳಿಲ್ಲದ ಉಡುಪು ಧರಿಸುವ ಮೂಲಕ ಅಂದವಾಗಿ ಕಾಣಬೇಕು ಎಂಬ ಆಸೆ ಪ್ರತಿಯೊಬ್ಬರಿಗೂ ಇರತ್ತೆ.

ಆದರೆ ಕೆಲವರಿಗೆ ಕಂಕುಳ ಕಪ್ಪಿನಿಂದಾಗಿ ತೋಳಿಲ್ಲದ ದಿರಿಸು ಧರಿಸಲು ಹಿಂಜರಿಕೆ.

ಈ ಸಮಸ್ಯೆಗೆ ಕಾರಣಗಳು ಹಲವು. ಬೇಡದ ಕೂದಲ ನಿವಾರಣೆಗೆ ಬಳಸುವ ಕ್ರೀಮ್, ಫಂಗಸ್ ಸೋಂಕು ಮುಂತಾದವುಗಳಿಂದ ಕಂಕುಳ ಕೆಳಗೆ ಕಪ್ಪಾಗಿರುತ್ತದೆ.

ಕಂಕುಳಕಪ್ಪನ್ನು ನಿವಾರಿಸಲೆಂದೇ ಕೆಲವೊಂದು ಕ್ರೀಮ್ ಗಳು ಲಭ್ಯವಿದ್ದರೂ ಅವುಗಳ ಪರಿಣಾಮ ಕಡಿಮೆಯೇ ಎಂದು ಹೇಳಬಹುದು.

ಅದರ ಬದಲು ಮನೆಯಲ್ಲಿಯೇ ಈ ಕಲೆಯನ್ನು ತೆಗೆದು ಸಹಜ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು.

ಆ್ಯಪಲ್ ಸೈಡರ್ ವಿನೆಗರ್: ಇದರಲ್ಲಿ ಅಮಿನೊ ಹಾಗೂ ಲಾಕ್ಟಿಕ್ ಆ್ಯಸಿಡ್ ಅಂಶ ಅಧಿಕವಿದ್ದು ಸತ್ತ ಚರ್ಮದ ಜೀವಕೋಶವನ್ನು ನಾಶ ಮಾಡಲು ಇವು ಸಹಕಾರಿ.

ಇದು ಕಂಕುಳಿನ ಚಿಕ್ಕ ಚಿಕ್ಕ ರಂಧ್ರಗಳನ್ನು ಮುಚ್ಚಿ ಹೊಳಪು ಹೆಚ್ಚುವಂತೆ ಮಾಡುತ್ತದೆ.

ಆ್ಯಪಲ್ ಸೈಡರ್ ವಿನೆಗರ್ ಅನ್ನು ಹತ್ತಿಯಲ್ಲಿ ಅದ್ದಿ ಕಂಕುಳಿನ ಸುತ್ತಲೂ ಹಚ್ಚಿ ಒಣಗಲು ಬಿಡಿ. ಚೆನ್ನಾಗಿ ಒಣಗಿದ ಮೇಲೆ ನೀರಿನಿಂದ ತೊಳೆಯಿರಿ. ಪ್ರತಿದಿನ ಇದನ್ನು ಮಾಡುವುದರಿಂದ ಕ್ರಮೇಣ ಕಪ್ಪು ಚರ್ಮ ತಿಳಿಯಾಗುತ್ತದೆ.

ಲೋಳೆಸರ: ಲೋಳೆಸರದ ಗಿಡದಿಂದ ಎಲೆಯನ್ನು ಕಿತ್ತು ಅದರ ಒಳಗಿರುವ ಲೋಳೆಯನ್ನು ಕಂಕುಳಿಗೆ ಹಚ್ಚಿ.

15 ನಿಮಿಷಗಳ ಕಾಲ ಒಣಗಲು ಬಿಡಿ. ನಂತರ ನೀರಿನಿಂದ ತೊಳೆಯಿರಿ. ಇದನ್ನು ದಿನ ಬಿಟ್ಟು ದಿನ ಮಾಡಿ.

ಸೌತೆಕಾಯಿ: ಸೌತೆಕಾಯಿಯನ್ನು ಅರೆದು ರಸ ತೆಗೆಯಿರಿ. ನಂತರ ಹತ್ತಿಯನ್ನು ರಸದಲ್ಲಿ ಅದ್ದಿ ಕಂಕುಳಿನ ಸುತ್ತಲೂ ಹಚ್ಚಿ. ಕಂಕುಳಿನಿಂದ ಬರುವ ದುರ್ವಾಸನೆಯೂ ಕಡಿಮೆಯಾಗುತ್ತದೆ.

ಸಕ್ಕರೆ ಹಾಗೂ ಆಲಿವ್ ಎಣ್ಣೆ: ಸಕ್ಕರೆ ಹಾಗೂ ಆಲಿವ್ ಎಣ್ಣೆಯ ಮಿಶ್ರಣವನ್ನು ಹಚ್ಚುವುದರಿಂದ ಒಣಚರ್ಮಕ್ಕೆ ಮರುಜೀವ ಸಿಗುವುದಲ್ಲದೇ ಕಾಂತಿಯು ಹೆಚ್ಚುತ್ತದೆ.

ಮಿಶ್ರಣವನ್ನು ಕಂಕುಳಿಗೆ ಹಚ್ಚಿ ಸ್ಕ್ರಬ್ ನಂತೆ ಉಜ್ಜಿ. 10 ನಿಮಿಷ ಒಣಗಲು ಬಿಟ್ಟು ನಂತರ ತಣ್ಣೀರಿನಿಂದ ತೊಳೆಯಿರಿ.

ಆಲೂಗೆಡ್ಡೆ: ಆಲೂಗೆಡ್ಡೆಯನ್ನು ಎರಡು ಭಾಗ ಮಾಡಿ ಅದನ್ನು ಕಂಕುಳಿಗೆ ಉಜ್ಜಬಹುದು ಅಥವಾ ಆಲೂಗೆಡ್ಡೆಯ ಸಿಪ್ಪೆ ತೆಗೆದು ಅದನ್ನು ಅರೆದು ರಸ ತೆಗೆದು ಹಚ್ಚಬಹುದು.

ಅದನ್ನು 15 ರಿಂದ 20 ನಿಮಿಷಗಳ ಕಾಲ ಹಾಗೇ ಬಿಟ್ಟು ಒಣಗಿದ ಮೇಲೆ ತೊಳೆಯಬೇಕು. ಪ್ರತಿದಿನ ಹೀಗೆ ಮಾಡುವುದರಿಂದ ಕಪ್ಪು ಕಲೆ ನಿವಾರಣೆಯಾಗುತ್ತದೆ.

Edited By : Nirmala Aralikatti
PublicNext

PublicNext

01/12/2020 05:48 pm

Cinque Terre

23.78 K

Cinque Terre

0