ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಶ್ಮೀರಿ ಪುಲಾವ್

ಈ ಪುಲಾವ್ ಹೆಸರು ಕೇಳುತ್ತಲೇ ಬಾಯಿಯಲ್ಲಿ ನೀರು ಬರತ್ತೆ ಒಮ್ಮೆಯಾದ್ರು ತಿಂದು ಬಿಡಬೇಕು ಅನ್ನಸತ್ತೆ.

ಹೌದು ಕಾಶ್ಮೀರದ ಸೌಂದರ್ಯ ಹೇಗೆ ಮನಸ್ಸಿಗೆ ಮುದ ನೀಡುತ್ತದೆಯೋ ಹಾಗೆ ಕಾಶ್ಮೀರಿ ಪುಲಾವ್ ಬಾಯಿಗೆ ರುಚಿ.

ಹಾಗಿದ್ರೆ ಇನ್ನೇಕೆ ತಡ ಮಾಡಿ ಕಾಶ್ಮೀರಿ ಪುಲಾವ್

ಬೇಕಾಗುವ ಪದಾರ್ಥ:

ಒಂದು ಕಪ್ ಬಾಸುಮತಿ ಅಕ್ಕಿ, 7-8 ಸುಟ್ಟ ಗೋಡಂಬಿ, 7-8 ಕತ್ತರಿಸಿದ ಬಾದಾಮಿ, ಸ್ವಲ್ಪ ದಾಳಿಂಬೆ ಬೀಜ, ಸಣ್ಣಗೆ ಹೆಚ್ಚಿರುವ ಅರ್ಧ ಸೇಬು, ಒಂದೆರಡು ದಾಲ್ಚಿನಿ, ಎರಡು ಏಲಕ್ಕಿ, ಅರ್ಧ ಚಮಚ ಕಾಶ್ಮೀರಿ ಮೆಣಸಿನ ಪುಡಿ, ಒಂದು ಟೀ ಚಮಚ ಸಕ್ಕರೆ, ಒಂದು ಟೀ ಚಮಚ ಕೇಸರಿ, ಸ್ವಲ್ಪ ತುಪ್ಪ, ರುಚಿಗೆ ತಕ್ಕಷ್ಟು ಉಪ್ಪು.

ಕಾಶ್ಮೀರಿ ಪುಲಾವ್ ಮಾಡುವ ವಿಧಾನ :

ಬಾಸುಮತಿ ಅಕ್ಕಿಯನ್ನು ಚೆನ್ನಾಗಿ ತೊಳೆದು ಅರ್ಧ ತಾಸು ನೀರಿನಲ್ಲಿ ನೆನೆಸಿಡಿ. ಒಂದು ಪ್ಯಾನ್ ಗೆ ತುಪ್ಪ ಹಾಕಿ ಬಿಸಿ ಮಾಡಿ. ಅದಕ್ಕೆ ದಾಲ್ಚಿನಿ ಎಲೆ, ಲವಂಗ, ಏಲಕ್ಕಿ ಹಾಕಿ.

ನಂತರ ಕಾಶ್ಮೀರಿ ಮೆಣಸಿನ ಪುಡಿ, ಸಕ್ಕರೆ, ಕೇಸರಿ, ಉಪ್ಪು ಹಾಕಿ ಮಿಕ್ಸ್ ಮಾಡಿ. ಈಗ ನೆನೆಸಿದ ಬಾಸುಮತಿ ಅಕ್ಕಿಯನ್ನು ಇದಕ್ಕೆ ಹಾಕಿ ಚೆನ್ನಾಗಿ ಕಲಸಿ.

ಅಕ್ಕಿಗೆ ಎರಡು ಪಟ್ಟು ನೀರನ್ನು ಪ್ಯಾನ್ ಗೆ ಹಾಕಿ 10-12 ನಿಮಿಷ ಕುದಿಸಿ.

ಅಕ್ಕಿ ಬೆಂದ ಮೇಲೆ ಅದನ್ನು ದೊಡ್ಡ ಪಾತ್ರೆಗೆ ಹಾಕಿ ಬಾದಾಮಿ, ಗೋಡಂಬಿ, ಸೇಬು ಮತ್ತು ದಾಳಿಂಬೆ ಬೀಜಗಳನ್ನು ಹಾಕಿ. ಈಗ ಕಾಶ್ಮೀರಿ ಪುಲಾವ್ ಸವಿಯಲು ಸಿದ್ಧ.

Edited By : Nirmala Aralikatti
PublicNext

PublicNext

29/11/2020 07:31 am

Cinque Terre

42.07 K

Cinque Terre

1