ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆಹಾರ ಪಾತ್ರೆಗೆ ಅಂಟಿಕೊಳ್ಳದಿರಲು ಹೀಗೆ ಮಾಡಿ

ಅಡಿಗೆ ಎಂಬುವುದ ಒಂದು ಕಲಾತ್ಮಕ ಕುಸುರಿ ಇದನ್ನು ಜಾಗರೂಕತೆಯಿಂದ ಮಾಡಬೇಕು.

ಸ್ವಲ್ಪ ಹೆಚ್ಚು ಕಡಿಮೆಯಾದರೂ ಆಹಾರ ಹೆಚ್ಚು ಬೇಯಬಹುದು, ಸುಟ್ಟುಹೋಗಬಹುದು ಅಥವಾ ಕಡಿಮೆ ಬೇಯಬಹುದು. ಇಂತಹ ಒಂದು ಸಮಸ್ಯೆಯೆಂದರೆ ಪಾತ್ರೆಯ ತಳದಲ್ಲಿ ಆಹಾರ ಅಂಟಿಕೊಳ್ಳುವುದು.

ಅಂಟಿಕೊಂಡ ಆಹಾರ ತೆಗೆಯಲು ಕೆಲವು ಸರಳ ಸಲಹೆಗಳು ಇಲ್ಲಿವೆ ನೋಡಿ.

ಜಿಡ್ಡಾಗುವುದು

ನಿಮ್ಮ ಪಾತ್ರೆಗೆ ಜಿಡ್ಡು ಅಂಟಿಕೊಂಡಿದ್ದರೆ ಅದರರ್ಥ ಎಣ್ಣೆಯನ್ನಾ ಸರಿಯಾಗಿ ಪಾತ್ರಯ ತುಂಬ ಹರಡಿಲ್ಲ ಎಂದರ್ಥ.

ಎಣ್ಣೆ ಹಾಕಿ, ಅದನ್ನು ಪಕ್ಕಕ್ಕೆ ಸರಿಯಾಗಿ ಹರಡಿ. ನೀವು ನಿಮ್ಮ ಪಾತ್ರೆಯಲ್ಲಿ ಜಿಡ್ಡನ್ನು ಸರಿಯಾಗಿ ಹರಡಲು ಸಿಲಿಕಾನ್ ಬ್ರಶ್ ಸಹ ಬಳಸಬಹುದು.

ನೀರು ಸೇರಿಸುವುದು

ಬೇಯಿಸುವ ವಿಷಯಕ್ಕೆ ಬಂದಾಗ, ನೀರು ಸೇರಿಸಿದ ಆಹಾರಗಳು ಹೆಚ್ಚು ಪ್ರಯೋಜನಕಾರಿ.

ನೀವು ಆಹಾರ ಸ್ವಲ್ಪ 'ಒಣಗಿದಂತಾದಾಗ' ಸುಲಭವಾಗಿ ನೀರು ಸೇರಿಸಬಹುದು.

ಇದನ್ನು ಸಾಮಾನ್ಯವಾಗಿ ಜೀರಿಗೆ, ಈರುಳ್ಳಿ ಮತ್ತು ನಿಮ್ಮ ಆಯ್ಕೆಯ ಇತರ ಮಸಾಲೆಗಳನ್ನು ಸೇರಿಸಿ ಸಿದ್ಧಪಡಿಸಬಹುದು. ನೀವು ನೀರು ಆಧಾರಿತ ಅಡಿಗೆ ಮಾಡುತ್ತಿಲ್ಲದಿದ್ದರೂ, ಆಹಾರ ಅಂಟಿಕೊಳ್ಳದಂತೆ ತಡೆಯಲು ಅಡಿಗೆಯಲ್ಲಿ ಕೆಲವು ಟೀಸ್ಪೂನ್ ನೀರು ಬೆರೆಸಬಹುದು.

ಟೊಮ್ಯಾಟೋದಿಂದ ಮಾಡುವ ಅಡಿಗೆಗಳು

ನೀರಿನ ಹೊರತಾಗಿ, ನೀರಿಲ್ಲದ ಅಡಿಗೆ ಮಾಡುವಾಗ ಸಸ್ಯಹಾರ ಅಥವಾ ಇತರ ಸಾಂಬಾರ್ ಗಳಂತಹ ಅನೇಕ ಭಾರತೀಯ ಅಡಿಗೆಗಳಲ್ಲಿ, ಟೊಮ್ಯಾಟೋ ಅತ್ಯಂತ ಪ್ರಮುಖ ಪದಾರ್ಥವಾಗಿದೆ.

ಕತ್ತರಿಸಿದ ಟೊಮ್ಯಾಟೋಗಳನ್ನು ಬಳಸುವ ಬದಲಾಗಿ, ಟೊಮ್ಯಾಟೋ ಪ್ಯೂರಿ ಬಳಸುವುದರಿಂದ ಇತರ ಒಣ ಪದಾರ್ಥಗಳು ತಳಕ್ಕೆ ಅಂಟಿಕೊಳ್ಳದಂತೆ ತಡೆಯಬಹುದು.

ಮೊದಲೇ ಬಿಸಿಮಾಡುವುದು

ಪಾತ್ರೆ ತಳಕ್ಕೆ ಆಹಾರ ಅಂಟಿಕೊಳ್ಳದಂತೆ ತಡೆಯಲು ಪಾತ್ರೆ ಮತ್ತು ಎಣ್ಣೆ ಎರಡನ್ನೂ ಮೊದಲೇ ಸ್ವಲ್ಪ ಬಿಸಿ ಮಾಡುವುದು ಉತ್ತಮ.

ಸರಿಯಾಗಿ ಬಿಸಿ ಮಾಡಿ ಎಣ್ಣೆ ಹಾಕಿದ ಪಾತ್ರೆ ಅಹಾರ ಮೇಲ್ಮೈಗೆ ಅಂಟಿಕೊಳ್ಳದಂತೆ ತಡೆದು ಆಹಾರವನ್ನು ಸರಿಯಾಗಿ ಬೇಯಿಸುತ್ತದೆ.

ಕಲಕುವುದು

ಲೋಹದ ಸ್ಪೂನ್ ಗೆ ಬದಲಾಗಿ ಮರದ ಸ್ಪೂನ್ ತೆಗೆದುಕೊಳ್ಳುವುದು ಉತ್ತಮ. ಲೋಹ ಅಥವಾ ನಾನ್ ಸ್ಟಿ ಪಾತ್ರೆಗೆ ಲೋಹದ ಸ್ಪೂನ್ ಬಳಸುವುದರಿಂದ ಪಾತ್ರೆಯ ತಳಭಾಗ ಕೆರೆದಂತಾಗಿ ಸವೆಯುತ್ತದೆ.

ಮಧ್ಯದಲ್ಲಿ ಕಲಕುತ್ತಿದ್ದರೆ, ಪಾತ್ರೆಯ ತಳಭಾಗಕ್ಕೆ ಆಹಾರ ಅಂಟಿಕೊಳ್ಳದಂತೆ ತಡೆಯುತ್ತದೆ.

Edited By : Nirmala Aralikatti
PublicNext

PublicNext

12/11/2020 03:46 pm

Cinque Terre

24.86 K

Cinque Terre

0