ಸುಂದರವಾದ ಉಗುರುಗಳೆಂದ್ರೆ ಎಲ್ಲರಿಗೂ ಇಷ್ಟ ದಿನಕ್ಕೊಂದು ನೇಲ್ ಆರ್ಟ್ ಮಾಡಿ ಸಂಭ್ರಮಿಸುವವರೇ ಹೆಚ್ಚು.
ಸುಂದರ ಸೌಂದರ್ಯಕ್ಕಾಗಿ ಕೆಲವೊಂದು ಟಿಪ್ಸ್ ಫಾಲೋ ಮಾಡಲೇ ಬೇಕಾಗುತ್ತದೆ.
ಅವುಗಳೆಂದ್ರೆ….
ನಿಂಬೆ ರಸದಿಂದ ಉಗುರುಗಳ ಅಂದವನ್ನು ಹೆಚ್ಚಿಸಬಹುದು. ಇದರಿಂದ ಕಲೆಗಳನ್ನು ಕೂಡ ತೆಗೆದು ಹಾಕಬಹುದು.
ನಿಂಬೆ ರಸ ಮತ್ತು ವಿನೆಗರ್ ನ್ನು ಬೆಚ್ಚಗಿನ ನೀರಿನಲ್ಲಿ ಮಿಶ್ರಣ ಮಾಡಿ ನಿಮ್ಮ ಕೈಗಳನ್ನು ನೆನೆಸಿಟ್ಟು ಕೈಗಳನ್ನು ಬ್ರಶ್ ನಿಂದ ಉಜ್ಜಿ. ಇದನ್ನು ವಾರಕ್ಕೊಮ್ಮೆ ಮಾಡಿ.
ನೀರಿನಲ್ಲಿ ಕೆಲಸ ಮಾಡುವುದರಿಂದ ಉಗುರುಗಳು ಒಣಗಬಹುದು. ಬೇಬಿ ಆಯಿಲ್ ನಿಂದ ಉಗುರುಗಳನ್ನು ಪ್ರತಿದಿನ ಮಸಾಜ್ ಮಾಡಿ.
ಇದು ನಿಮ್ಮ ಉಗುರುಗಳ ತೇವಾಂಶವನ್ನು ಲಾಕ್ ಮಾಡುತ್ತದೆ. ಇದರಿಂದ ಉಗುರು ಹೊಳೆಯುತ್ತವೆ.
ಬಿಸಿ ನೀರಿನಲ್ಲಿ ಕೈಗಳನ್ನು ನೆನೆಸಿಟ್ಟು ಬಳಿಕ ಉಗುರುಗಳಿಗೆ ಆಲಿವ್ ಆಯಿಲ್ ಹಚ್ಚಿ ಮಸಾಜ್ ಮಾಡಿದರೆ ಉಗುರುಗಳು ಮೃದುವಾಗುತ್ತವೆ.
PublicNext
09/11/2020 10:59 am