ಸ್ವಾಧಿಷ್ಟಕರವಾಗಿ ಸ್ಪೆಷಲ್ ಎಗ್ ಕರ್ರಿ ಮಾಡಿ ಸವಿಯಿರಿ.
ಬೇಕಾಗುವ ಪದಾರ್ಥಗಳು
ಮೊಟ್ಟೆ 4, ಈರುಳ್ಳಿ 2ರಿಂದ 3, ಶುಂಠಿ ಸ್ವಲ್ಪ, ಕೊತ್ತಂಬರಿ ಸೊಪ್ಪು ಸ್ವಲ್ಪ, ಧನಿಯಾ ಪುಡಿ ಅರ್ಧಚಮಚ, ಟೊಮೆಟೋ 3, ಅಚ್ಚ ಖಾರದ ಪುಡಿ 1 ಚಮಚ, ಬೆಳ್ಳುಳ್ಳಿ 8 ಎಸಳು, ಜೀರಿಗೆ 1 ಚಮಚ, ಹಸಿ ಮೆಣಸಿನ ಕಾಯಿ 2ರಿಂದ 4, ಗರಂ ಮಸಾಲೆ ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ
ಮೊದಲು ಮೊಟ್ಟೆ ಬೇಯಿಸಿಕೊಂಡು ಸಿಪ್ಪೆ ತೆಗೆದು ನಾಲ್ಕು ಭಾಗ ಮಾಡಿದಂತೆ ಬುಡ ಬಿಚ್ಚಿಕೊಳ್ಳದಂತೆ ಕಟ್ ಮಾಡಿ ಇಟ್ಟುಕೊಳ್ಳಿ.
ಟೊಮೆಟೋ, ಈರುಳ್ಳಿ ಸಣ್ಣಗೆ ಕಟ್ ಮಾಡಿ. ಕೊತ್ತಂಬರಿ ಸೊಪ್ಪು ಸಹ ಸಣ್ಣಗೆ ಕಟ್ ಮಾಡಿಕೊಳ್ಳಿ.
ಶುಂಠಿ-ಬೆಳ್ಳುಳ್ಳಿ ನುಣ್ಣಗೆ ಅರೆದು ಪೇಸ್ಟ್ ಮಾಡಿಕೊಳ್ಳಿ.
ಒಂದು ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಎರಡು ಚಮಚ ಎಣ್ಣೆ ಹಾಕಿ ಬಿಸಿಯಾಗಿರುವ ಎಣ್ಣೆಗೆ ಜೀರಿಗೆ ಹಾಕಿ ಒಗ್ಗರಣೆ ಮಾಡಿ.
ಈರುಳ್ಳಿ ಚೂರುಗಳನ್ನು ಹಾಕಿ ಹಸಿಮೆಣಸಿನಕಾಯಿ ಸಹ ಹಾಕಿ ಕೆಂಪಗೆ ಹುರಿದುಕೊಳ್ಳಿ.
ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವ ತನಕ ಫ್ರೈ ಮಾಡಿ. ಅರಿಶಿನ ಹಾಕಿ ಅಚ್ಚ ಖಾರದ ಪುಡಿ , ಧನಿಯಾ ಪುಡಿ, ಉಪ್ಪು ಹಾಕಿ ಚೆನ್ನಾಗಿ ಕಲೆಸಿ.
ಮಸಾಲೆ ಬೇಯಿಸಲು ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಫ್ರೈ ಮಾಡಿದ ನಂತರ ಮೊಟ್ಟೆಯ ನಡುವೆ ಮಸಾಲೆ ತುಂಬಿಸಿ.
ಇನ್ನೊಂದು ಬಾಣಲೆ ಒಲೆಯ ಮೇಲೆ ಇಟ್ಟು ಸ್ವಲ್ಪ ಎಣ್ಣೆ ಹಾಕಿ. ಬಿಸಿಯಾದ ಎಣ್ಣೆಗೆ ಮಸಾಲೆ ತುಂಬಿರುವ ಮೊಟ್ಟೆ ಇಟ್ಟು ಎರಡು ಕಡೆ ಫ್ರೈ ಮಾಡಿ ಉಳಿದ ಮಸಾಲೆಗೆ ನೀರು ಸೇರಿಸಿ ಮೊಟ್ಟೆಯ ಮೇಲೆ ಹಾಕಿ.
ನಂತರ ಗರಂ ಮಸಾಲೆ ಯನ್ನು ಹಾಕಿ , ಸಣ್ಣಗೆ ಹೆಚ್ಚಿರುವ ಕೊತ್ತಂಬರಿ ಸೊಪ್ಪು ಹಾಕಿರಿ.
ಎರಡು ನಿಮಿಷಗಳ ನಂತರ ಕೆಳಗೆ ಇಳಿಸಿ. ರುಚಿಕರವಾದ ಸ್ವಾಧಿಷ್ಟಕರ ಸ್ಪೆಷಲ್ ಎಗ್ ಕರ್ರಿ ಸವಿಯಲು ರೆಡಿ.
PublicNext
08/11/2020 11:44 am