ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಳಿಗಾಲಕ್ಕೆ ಒಂದಿಷ್ಟು ಬ್ಯೂಟಿ ಟಿಪ್ಸ್

ಚಳಿಗಾಲದ ಆರಂಭಿಕ ದಿನಗಳು ನಮಗೆ ಸ್ವಲ್ಪ ಸಹಕಾರಿಯಾಗಿ ಇರುತ್ತೆ. ಆದ್ರೆ ನಂತರದ ಚಳಿಗಾಲದ ಮಧ್ಯ ಭಾಗದಲ್ಲಿ ನಮ್ಮ ತ್ವಚೆಗೆಸವಾಲು ಎದುರಾಗುತ್ತದೆ. ಹೊರಗಡೆ ವಾತಾವರಣ ತಂಪಾಗಿದ್ದರೂ ಸಹ ನಮ್ಮ ಚರ್ಮದ ಸಮಸ್ಯೆಗಳು ಒಂದಾದ ಮೇಲೊಂದರಂತೆ ಕಾಡಲು ಪ್ರಾರಂಭವಾಗುತ್ತವೆ. ಇದರಲ್ಲಿ ಚರ್ಮ ಸುಕ್ಕುಗಟ್ಟುವುದು ಒಂದೆಡೆಯಾದರೆ ಚರ್ಮ ಒಡೆದುಕೊಳ್ಳುವುದು ಇನ್ನೊಂದು ಕಡೆ. ಏನೇ ಇದ್ದರೂ ನಮ್ಮ ಸೌಂದರ್ಯ ರಕ್ಷಣೆ ನಮ್ಮ ಹೊಣೆ. ಬೇರೆ ಎಲ್ಲಾ ಸಮಯಗಳಿಗೆ ಹೋಲಿಸಿದರೆ ಚಳಿಗಾಲದಲ್ಲಿ ನಾವು ನಮ್ಮ ತ್ವಚೆಯ ಬಗ್ಗೆ ವಿಶೇಷವಾದ ಕಾಳಜಿ ವಹಿಸಬೇಕು. ಈ ಲೇಖನದಲ್ಲಿ ಅಂತಹ ಕೆಲವು ಸಲಹೆಗಳು ನಿಮಗಾಗಿ.

ಚಳಿಗಾಲ ಆರಂಭವಾದ ನಂತರ ನಾವು ಬಹುಮುಖ್ಯವಾಗಿ ಜಾಗರೂಕತೆ ವಹಿಸಬೇಕಾದುದು ನಮ್ಮ ಮೈ ಮೇಲಿನ ಚರ್ಮದ ಬಗ್ಗೆ. ಏಕೆಂದರೆ ಚಳಿಗಾಲದ ಕೆಟ್ಟ ಪ್ರಭಾವ ಮೊದಲು ಎದುರಾಗುವುದು ನಮ್ಮ ಸುಂದರ ಮತ್ತು ಕೋಮಲವಾದ ತ್ವಚೆಗೆ.

ಚಳಿಗಾಲದಲ್ಲಿ ನಮ್ಮ ಚರ್ಮ ಹೊಡೆದುಕೊಳ್ಳುವುದು ಸಾಮಾನ್ಯ ತುಂಬಾ ಸುಡುವ ನೀರನ್ನು ಬಳಸಿಕೊಂಡು ನಾವು ಸ್ನಾನ ಮಾಡುವುದರಿಂದ ನಮ್ಮ ಚರ್ಮದ ಮೇಲೆ ದದ್ದುಗಳು ಕಂಡುಬರುತ್ತವೆ ಮತ್ತು ನಮ್ಮ ಚರ್ಮ ಕೂಡ ಬಹಳ ಬೇಗನೆ ತನ್ನ ತೇವಾಂಶವನ್ನು ಕಳೆದುಕೊಂಡು ಒಣಗುತ್ತದೆ.

ನಮ್ಮ ಸ್ನಾನದ ಸಮಯವನ್ನು ಕೇವಲ ಐದರಿಂದ ಹತ್ತು ನಿಮಿಷಕ್ಕೆ ಮೀಸಲಾಗಿಸಿಕೊಳ್ಳಬೇಕು. ಸ್ನಾನ ಮಾಡಲು ಬಳಕೆ ಮಾಡುವ ನೀರು ಹೆಚ್ಚು ಸುಡುವಂತೆ ಇರಬಾರದು. ಉಗುರು ಬೆಚ್ಚಗಿನ ನೀರಾದರೆ ತುಂಬಾ ಒಳ್ಳೆಯದು.

ಹಾಗಾಗಿ ನಮ್ಮ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವು ಅನುಸರಿಸುವ ಪದ್ಧತಿಯಲ್ಲಿ ಸ್ನಾನ ಮಾಡುವ ಬಗೆ ಕೂಡ ಒಂದು. ನಾವು ಇದುವರೆಗೂ ಶವರ್ ಕೆಳಗೆ ಅರ್ಧಗಂಟೆ ಮುಕ್ಕಾಲು ಗಂಟೆ ನಿಂತು ಸ್ನಾನ ಮಾಡುತ್ತಿದ್ದ ಹಾಗೆ ಚಳಿಗಾಲದಲ್ಲಿ ಮಾಡಲು ಆಗುವುದಿಲ್ಲ.

ದಿನಕ್ಕೆ ಎರಡು ಅಥವಾ ಮೂರು ಬಾರಿ ನಿಮ್ಮ ಕೈಗಳನ್ನು ಮತ್ತು ಮುಖವನ್ನು ತಂಪಾದ ನೀರಿನಿಂದ ತೊಳೆದುಕೊಳ್ಳಿ. ಇದರಿಂದ ಸೂಕ್ಷ್ಮಾಣುಗಳು ದೂರಾಗುತ್ತವೆ.

Edited By : Nagaraj Tulugeri
PublicNext

PublicNext

07/11/2020 06:55 pm

Cinque Terre

32.57 K

Cinque Terre

0