ಈ ಆಲೂದಮ್ ವೀಕೆಂಡ್‌ಗಳಲ್ಲಿ ಸ್ಪೆಷಲ್ ಬ್ರೇಕ್‌ಫಾಸ್ಟ್ ಸವಿಯಬೇಕೆಂದು ಅನಿಸಿದ ದಿನ ಪೂರಿಗೆ ಕಾಂಬಿನೇಷನ್ ಆಗಿ ಮಾಡಲು ಬೆಸ್ಟ್ ಅಡುಗೆಯಾಗಿದೆ.
ಈ ಆಲೂದಮ್ ಮಾಡಲು ಸ್ವಲ್ಪ ಅಧಿಕ ಸಮಯ ಹಿಡಿಯುವುದು ಆದರೆ ಇದರ ರುಚಿಯ ಮುಂದೆ ಪಟ್ಟ ಶ್ರಮ ಸಾರ್ಥಕ ಅನಿಸುವುದು. ಇದನನ್ನು ಮಾಡುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ ನೋಡಿ
ಬೇಕಾಗುವ ಸಾಮಗ್ರಿ :
* 1 ಇಂಚಿನಷ್ಟು ದೊಡ್ಡದಿರುವ ಶುಂಠಿ (ಚಿಕ್ಕದಾಗಿ ಕತ್ತರಿಸಿದ್ದು)
* 2 ಹಸಿ ಮೆಣಸಿನಕಾಯಿ, ಕತ್ತರಿಸಿದ್ದು
* 1 ಈರುಳ್ಳಿ (ಕತ್ತರಿಸಿದ್ದು)
* 4 ಬೆಳ್ಳುಳ್ಳಿ ಎಸಳು
* ಆಲೂಗಡ್ಡೆ ರೋಸ್ಟ್ ಮಾಡಲು
* 250 ಗ್ರಾಂ ಚಿಕ್ಕ ಆಲೂಗಡ್ಡೆ (ಬೇಬಿ ಪೊಟೆಟೊ)
* 1 ಚಮಚ ಸಾಸಿವೆ ಎಣ್ಣೆ
* ರುಚಿಗೆ ತಕ್ಕ ಉಪ್ಪು
* ಆಲೂ ದಮ್‌ಗೆ ಬೇಕಾಗುವ ಸಾಮಗ್ರಿ
* 1 ಚಮಚ ಸಾಸಿವೆ ಎಣ್ಣೆ
* 4 ಏಲಕ್ಕಿ
* 1 ಇಂಚಿನಷ್ಟು ದೊಡ್ಡದಿರುವ ಚಕ್ಕೆ
* 4 ಲವಂಗ
* 2 ಪಲಾವ್ ಎಲೆ
* 1 ಚಮಚ ಅರಿಶಿಣ ಪುಡಿ
* 1 ಚಮಚ ಖಾರದ ಪುಡಿ
* 1 ಚಮಚ ಗರಂ ಮಸಾಲ ಪುಡಿ
* 1ಚಮಚ ಕೊತ್ತಂಬರಿ ಪುಡಿ
* ಅರ್ಧ ಕಪ್ ಟೊಮೆಟೊ ಪೇಸ್ಟ್(ಮನೆಯಲ್ಲಿಯೇ ಮಾಡಿದ್ದು)
* ಅರ್ಧ ಕಪ್ ಮೊಸರು
* 1 ಚಮಚ ಸಕ್ಕರೆ
* ರುಚಿಗ ತಕ್ಕ ಉಪ್ಪು
* ಸ್ವಲ್ಪ ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ :
* ಆಲೂಗಡ್ಡೆಯನ್ನು ಬೇಯಿಸಿ ಸಿಪ್ಪೆ ಸುಲಿದು ಇಟ್ಟುಕೊಳ್ಳಿ.
* ಮಿಕ್ಸಿ ಜಾರ್‌ಗೆ ಈರುಳ್ಳಿ, ಶುಂಠಿ, ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ ಹಾಕಿ ರುಬ್ಬಿ ಒಂದು ಕಪ್‌ನಲ್ಲಿ ಹಾಕಿಡಿ.
* ಮುಂದಿನ ಹಂತವೆಂದರೆ ಆಲೂಗಡ್ಡೆಯನ್ನು ರೋಸ್ಟ್ ಮಾಡುವುದು. 2 ಚಮಚ ಎಣ್ಣೆಯನ್ನು ಪ್ಯಾನ್‌ಗೆ ಹಾಕಿ ಬಿಸಿ ಮಾಡಿ ಅದರಲ್ಲಿ ಆಲೂಗಡ್ಡೆ, ಚಿಟಿಕೆಯಷ್ಟು ಅರಿಶಿಣ ಪುಡಿ ಹಾಗೂ ರುಚಿಗೆ ತಕ್ಕ ಉಪ್ಪು ಹಾಕಿ ಮಿಕ್ಸ್ ಮಾಡಿ ರೋಸ್ಟ್ ಮಾಡಿ. ಒಂದು 5-6 ನಿಮಿಷ ರೋಸ್ಟ್ ಮಾಡಿದರೆ ಸಾಕು. ಆಲೂಗಡ್ಡೆ ಕಂದು ಬಣ್ಣಕ್ಕೆ ತಿರುಗವಷ್ಟು ಹೊತ್ತು ರೋಸ್ಟ್ ಮಾಡಿರಬೇಕು. ನಂತರ ಅದನ್ನು ತೆಗೆದು ಒಂದು ಬೌಲ್ ನಲ್ಲಿ ಹಾಕಿಡಿ.
* ಈಗ ಫ್ರೈ ಮಾಡುವ ಪ್ಯಾನ್‌ಗೆ 2 ಚಮಚ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಕಡಿಮೆ ಉರಿಯಲ್ಲಿ ಸೌಟ್‌ನಿಂದ ಆಡಿಸಿ. ಈ ಪೇಸ್ಟ್‌ನ ಹಸಿ ವಾಸನೆ ಹೋಗಿ ಅದು ಸ್ವಲ್ಪ ಕಂದು ಬಣ್ಣಕ್ಕೆ ತಿರುಗಬೇಕು. ಹೀಗಾಗಲು 5 ನಿಮಿಷ ತೆಗೆದುಕೊಳ್ಳುತ್ತದೆ. ನಂತರ ಚಕ್ಕೆ ಹಾಗೂ ಲವಂಗ, ಪಲಾವ್ ಎಲೆ ಹಾಕಿ ಮತ್ತೆ 3-4 ನಿಮಿಷ ಸೌಟ್‌ನಿಂದ ಆಡಿಸುತ್ತಾ ಫ್ರೈ ಮಾಡಿ.
* ಈಗ ಟೊಮೆಟೊ ಪೇಸ್ಟ್ ಹಾಕಿ, ಅದಕ್ಕೆ ಅರಿಶಿಣ ಪುಡಿ, ಒಂದು ಚಮಚ ಕೊತ್ತಂಬರಿ ಪುಡಿ, ಒಂದು ಚಮಚ ಗರಂ ಮಸಾಲ ಪುಡಿ ಹಾಕಿ, ಇವೆಲ್ಲಾ ಮಿಶ್ರವಾದ ಬಳಿಕ ಖಾರದ ಪುಡಿ ಹಾಕಿ.
* ಈಗ ಚೆನ್ನಾಗಿ ಸೌಟ್‌ನಿಂದ ಆಡಿಸಿ, ಮೊಸರು ಹಾಕಿ ಮಿಶ್ರ ಮಾಡಿ, ಈಗ ರೋಸ್ಟ್ ಮಾಡಿದ ಆಲೂಗಡ್ಡೆ ಹಾಕಿ 1 ಚಮಚ ಸಕ್ಕರೆ ಹಾಕಿ.
* ಉಪ್ಪು ಸರಿಯಾಗಿದೆಯೇ ನೋಡಿ, ಪಾತ್ರೆಯ ಬಾಯಿ ಮಿಚ್ಚಿ ಕಡಿಮೆ ಉರಿಯಲ್ಲಿ 20 ನಿಮಿಷ ಬೇಯಿಸಿ. ಹೀಗೆ ಬೇಯಿಸುವಾಗ ತಳ ಹಿಡಿಯದಂತೆ ಒಂದೆರಡು ಬಾರಿ ತಿರುಗಿಸಿ.
* ಈಗ ಮಿಶ್ರ ಸ್ವಲ್ಪ ಗಟ್ಟಿಯಾದಾಗ ಸೌಟ್ ಆಫ್ ಮಾಡಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಪೂರಿ ಜೊತೆ ಸರ್ವ್ ಮಾಡಿ.
ಆಲೂ ದಮ್‌ಗೆ ಆಲೂಗಡ್ಡೆಯನ್ನು ಡೀಪ್ ಫ್ರೈ ಮಾಡಿ ಬಳಸಿದರೆ ರುಚಿ ಹೆಚ್ಚು, ಆದರೆ ಅಧಿಕ ಎಣ್ಣೆಯಂಶ ಬೇಡ ಎನ್ನುವವರು ಪ್ಯಾನ್‌ನಲ್ಲಿ ರೋಸ್ಟ್ ಮಾಡಿ
PublicNext
25/09/2020 08:20 pm