ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮನೆಯಲ್ಲೇ ಮಾಡಿ ಹೋಟೆಲ್ ಟೆಸ್ಟ್ ಕಡ್ಲೇ ಕಾಳಿನ ಮಸಾಲ ಚಾಟ್!

ಬೇಕಾಗುವ ಪದಾರ್ಥಗಳು

• 1 ಕಪ್ ಕಪ್ಪು ಕಡಲೆ

• 1 ಕಪ್ ಕೊತ್ತಂಬರಿ ಚಟ್ನಿ

• 4 ಚಮಚ ಹುಣಸೆಹಣ್ಣಿನ ಪೇಸ್ಟ್

• 1/2 ಕಪ್ ಕೊತ್ತಂಬರಿ ಸೊಪ್ಪು

• 1 ಚಮಚ ಚಾಟ್ ಮಸಾಲ

• 1 ಚಮಚ ಖಾರದ ಪುಡಿ

• 1 ಕಪ್ ಮೊಸರು

• 1 ಲೀಟರ್ ನೀರು

• ಅಗತ್ಯಕ್ಕೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ

- ಒಂದು ಪಾತ್ರೆಯಲ್ಲಿ ಕಡ್ಲೇ ಕಾಳನ್ನು 6-8 ಗಂಟೆಗಳ ಕಾಲ ನೆನೆಯಿಡಿ.

- ಕುಕ್ಕರ್ ನಲ್ಲಿ ನೆನೆಸಿದ ಕಡ್ಲೇ ಕಾಳು, 2 ಲೋಟ ನೀರು ಮತ್ತು ಸ್ವಲ್ಪ ಉಪ್ಪನ್ನು ಸೇರಿಸಿ, ಕುಕ್ಕರ್ ಮುಚ್ಚಿ.- 6-7 ಸೀಟಿಯನ್ನು ಕೂಗಿಸಿ, ಕುಕ್ಕರ್ ಅನ್ನು ಉರಿಯಿಂದ ಕೆಳಗಿಳಿಸಿ.

ಬೇಯಿಸಿದ ಕಡ್ಲೇ ಕಾಳನ್ನು ಕೊಠಡಿಯ ತಾಪಮಾನಕ್ಕೆ ಬರುವಷ್ಟು ತಣಿಸಿಕೊಳ್ಳಿ.

*ಒಂದು ಪಾತ್ರೆಯಲ್ಲಿ ಬೇಯಿಸಿಕೊಂಡ ಕಡ್ಲೇ ಬೇಳೆ, ಚಿಪ್ಸ್, ಮೊಸರು, ಕೊತ್ತಂಬರಿ ಚಟ್ನಿ, ಹುಣಸೆ ಚಟ್ನಿ, ಮೆಣಸಿನ ಪುಡಿ, ಚಾಟ್ ಮಸಾಲ, ರುಚಿಗೆ ತಕ್ಕಷ್ಟು ಉಪ್ಪು, ಬೂಂದಿ ಕಾಳನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.- ಅಗತ್ಯವಿದ್ದರೆ ಹುಣಸೆ ಹಣ್ಣಿನ ಪೇಸ್ಟ್ ಸೇರಿಸಿ. - ನಂತರ ಕೊತ್ತಂಬರಿ ಸೊಪ್ಪಿನ ಅಲಂಕಾರ ಮಾಡಿ ಸವಿಯಲು ನೀಡಿ.

Edited By : Nirmala Aralikatti
PublicNext

PublicNext

02/11/2020 04:10 pm

Cinque Terre

28.67 K

Cinque Terre

0