ಬೇಕಾಗುವ ಪದಾರ್ಥಗಳು
• 1 ಕಪ್ ಅಗತ್ಯಕ್ಕೆ ತಕ್ಕಷ್ಟು ಶೀತಲೀಕರಿಸಿದ ತರಕಾರಿ
• 1 ಕಪ್ ಅಗತ್ಯಕ್ಕೆ ತಕ್ಕಷ್ಟು ಅಕ್ಕಿ
• 3 - ಕ್ಯೂಬ್ಡ್/ಸ್ವಲ್ಪ ದೊಡ್ಡದಾಗ ಚೌಕರೀತಿಯಲ್ಲಿ ಕತ್ತರಿಸಿದ ಚೆರ್ರಿ ಟೊಮೆಟೊ
• 1/2 ಕಪ್ ಅಗತ್ಯಕ್ಕೆ ತಕ್ಕಷ್ಟು ತೊಗರಿಬೇಳೆ
• 5 ಚಮಚ ಅಗತ್ಯಕ್ಕೆ ತಕ್ಕಷ್ಟು ವಾಂಗಿ ಬಾತ್ ಮಸಾಲ
• ಅಗತ್ಯಕ್ಕೆ ತಕ್ಕಷ್ಟು ಸಾಸಿವೆ
• 2 inch ಚಕ್ಕೆ
• 4 - ಲವಂಗ
• 1 ಅಗತ್ಯಕ್ಕೆ ತಕ್ಕಷ್ಟು ನಕ್ಷತ್ರಮೊಗ್ಗು
• 1 ಮುಷ್ಟಿಯಷ್ಟು ಗೋಡಂಬಿ
• 2 - ಕೆಂಪು ಮೆಣಸು
• ಅಗತ್ಯಕ್ಕೆ ತಕ್ಕಷ್ಟು ಇಂಗು
• ಅಗತ್ಯಕ್ಕೆ ತಕ್ಕಷ್ಟು ಅರಿಶಿಣ
• ಅಗತ್ಯಕ್ಕೆ ತಕ್ಕಷ್ಟು ತುರಿದ ತೆಂಗಿನಕಾಯಿ
• ಅಗತ್ಯಕ್ಕೆ ತಕ್ಕಷ್ಟು ಬೆಲ್ಲ
• ಅಗತ್ಯಕ್ಕೆ ತಕ್ಕಷ್ಟು ಉಪ್ಪು
ಒಗ್ಗರಣೆ
• 1 ಕಪ್ ಸಂಸ್ಕರಿಸಿದ ಎಣ್ಣೆ
• 1 ಕಪ್ ತುಪ್ಪ
ಮಾಡುವ ವಿಧಾನ
- ಕುಕ್ಕರ್ ಪಾತ್ರೆಯನ್ನು ತೆಗೆದುಕೊಂಡು ಸ್ವಲ್ಪ ಎಣ್ಣೆಯನ್ನು ಸೇರಿಸಿ, ಬಿಸಿ ಮಾಡಿ- ಎಣ್ಣೆ ಬಿಸಿಯಾದ ಬಳಿಕ ಸಾಸಿವೆ, ಒಣಮೆಣಸಿನ ಕಾಯಿ, ಗೋಡಂಬಿ, ಕರಿಬೇವಿನ ಎಲೆ ಮತ್ತು ಗರಂ ಮಸಾಲ ಸೇರಿಸಿ 2-3 ನಿಮಿಷಗಳ ಕಾಲ ಹುರಿಯಿರಿ.
- ಬಳಿಕ ಹೆಚ್ಚಿಕೊಂಡ ಟೊಮೆಟೊ, ಅರಿಶಿನ, ಚಿಟಿಕೆಯಷ್ಟು ಇಂಗು ಮತ್ತು ಹೆಚ್ಚಿಕೊಂಡ ತರಕಾರಿಗಳನ್ನು ಕುಕ್ಕರ್ ಗೆ ಸೇರಿಸಿ 2-3 ನಿಮಿಷಗಳ ಕಾಲ ಹುರಿಯಿರಿ.- ನಂತರ ಒಣ ತೆಂಗಿನ ತುರಿ ಮತ್ತು ಬಿಸಿಬೇಳೆ ಬಾತ್ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ.
- ನಂತರ ಅಕ್ಕಿಯನ್ನು ತೊಳೆದು ಕುಕ್ಕರ್ ಪಾತ್ರೆಗೆ ಸೇರಿಸಿ.- ಒಂದು ಕಪ್ ಅಕ್ಕಿಗೆ ಮೂರು ಕಪ್ ನೀರನ್ನು ಸೇರಿಸಿ.- ಮಿಶ್ರಣಕ್ಕೆ ಚಿಟಕೆ ಬೆಲ್ಲ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.- ಬಳಿಕ ಕುಕ್ಕರ್ ಮುಚ್ಚಳವನ್ನು ಮುಚ್ಚಿ.
- ಕುಕ್ಕರ್ ಅನ್ನು 3-4 ಸೀಟಿ ಕೂಗಿಸಿ, ಮಿಶ್ರಣವನ್ನು ಮೃದುವಾಗಿ ಬೇಯಸಿಕೊಳ್ಳಿ.- ಉಗಿ ಇಳಿದ ಬಳಿಕ, ಮುಚ್ಚಳವನ್ನು ತೆರೆದು, ಚೆನ್ನಾಗಿ ತಿರುವಿ.- ಬಿಸಿ ಬಿಸಿಯಾದ ಬಿಸಿಬೇಳೆ ಬಾತ್ ಅನ್ನು ಚಿಪ್ಸ್, ಬೂಂದಿ ಕಾಳು ಅಥವಾ ನಿಮ್ಮ ಆಯ್ಕೆಯ ರೈತಾದೊಂದಿಗೆ ಸವಿಯಲು ನೀಡಿ.
PublicNext
01/11/2020 03:58 pm