ಕೊಪ್ಪಳ/ಕುಷ್ಟಗಿ: ಕಾಂಗ್ರೆಸ್ ಪಕ್ಷ 75 ರಿಂದ 80 ಸ್ಥಾನಗಳಲ್ಲಿ ಗೆದ್ದು ಬಂದರೆ ನನ್ನ ಬೆರಳು ಕತ್ತರಿಸಿಕೊಡುತ್ತೇನೆ ಎಂದು ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಿವನಗೌಡ ನಾಯಕ ಹೇಳಿದ್ದಾರೆ .
ಕುಷ್ಟಗಿಯಲ್ಲಿ ಜನಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಈ ಮಾತು ಹೇಳಿದ್ದಾರೆ. ಇಷ್ಟು ವರ್ಷ ಆಳ್ವಿಕೆ ನಡಸಿದ ಕಾಂಗ್ರೆಸ್ ಮೀಸಲಾತಿ ಹೆಚ್ಚಳ ಮಾಡಲಿಲ್ಲ. ಆಗ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮೀಸಲಾತಿಯನ್ನು ನೀಡಿದರೆ ಈಗ ಆಧುನಿಕ ಅಂಬೇಡ್ಕರ್ ಆಗಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರು ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿದ್ದಾರೆ. ಬಸವರಾಜ ಬೊಮ್ಮಾಯಿ ಅವರಿಗೆ ಎಸ್‌ಸಿ, ಎಸ್‌ಟಿ ಸಮುದಾಯಗಳ ಬಗ್ಗೆ ಅಪಾರ ಕಾಳಜಿ ಇದೆ ಎಂದರು. ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರು ಎರಡು ರಾಜಾಹುಲಿಗಳು ಇದ್ದಂತೆ. ಯಡಿಯೂರಪ್ಪ ಅವರು ಮಹಾರಾಜಾ ಹುಲಿಯಾದರೆ ಬೊಮ್ಮಾಯಿ ಅವರು ರಾಜಾಹುಲಿ ಎಂದರು.
PublicNext
12/10/2022 10:15 pm