ಕೊಪ್ಪಳ: ಸಿದ್ದರಾಮಯ್ಯ ಮಾಡಿದ್ದ ಟ್ವೀಟ್‌ಗೆ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಬೊಮ್ಮಾಯಿ ಅವರಿಗೆ ಧೈರ್ಯ ಇಲ್ಲ, ಅದಕ್ಕೆ ಯಡಿಯೂರಪ್ಪನವರನ್ನು ಕರೆದುಕೊಂಡು ಹೋಗ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಇದು ಅವರ ಹತಾಶೆ ತಿಳಿಸುತ್ತೆ. ನಾವು ಸಾಮೂಹಿಕವಾಗಿ ಹೋಗ್ತಿವಿ. ಅವರ ತರಹ ಒಬ್ಬರ ಮೇಲೊಬ್ಬರು ಎತ್ತಿಕಟ್ಟಲ್ಲ. ಪ್ರಧಾನಿಗೆ ಸುದ್ದಿಗೋಷ್ಟಿ ನಡೆಸೋಕೆ ಆಗೋಲ್ಲ ಎಂಬ ಸಿದ್ದು ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಇದು ಹಾಸ್ಯಾಸ್ಪದ. ಸಿದ್ದರಾಮಯ್ಯ ಹತಾಶರಾಗಿ ಮಾತಾಡ್ತಿದ್ದಾರೆ. ಸೋನಿಯಾ ಅವರು ಮೋದಿ ಮೌತ್ ಕಾ ಸೌದಾಗರ್ ಎಂದಿದ್ರು. ಆದ್ರೆ ಇವತ್ತು ಮೋದಿ ಅವರೇ ಪ್ರಧಾನಿಯಾಗಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
PublicNext
12/10/2022 08:13 pm