ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಪ್ಪಳ: ಚಪ್ಪಲಿ ಹಾಕಿಕೊಂಡು ಬಾಗಿನ ಅರ್ಪಿಸಿದ ಮಾಜಿ ಸಚಿವ ರಾಯರೆಡ್ಡಿ

ಕೊಪ್ಪಳ: ಕೆರೆಗೆ ಬಾಗಿನ ಅರ್ಪಿಸುವ ವೇಳೆ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಚಪ್ಪಲಿ ಹಾಕಿಕೊಂಡು ಬಾಗಿನ ಅರ್ಪಿಸಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುರಡಿ ಕೆರೆಗೆ ಬಾಗಿನ ಅರ್ಪಿಸುವ ವೇಳೆ ಚಪ್ಪಲಿ ಹಾಕಿಕೊಂಡೆ ಬಾಗಿನ ಅರ್ಪಿಸಿದ್ದಾರೆ.

ಇನ್ನು ರಾಯರೆಡ್ಡಿ ಅವರಿಂದ ಧಾರ್ಮಿಕ ಭಾವನಗೆ ಧಕ್ಕೆಯಾಗಿದೆ‌. ಅಲ್ಲದೆ ರಾಯರೆಡ್ಡಿ ವಿರುದ್ಧ ಸಾಮಾಜಿಕ‌ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ರಾಯರೆಡ್ಡಿ ವಿರುದ್ಧ ಬಿಜೆಪಿ ಕಾರ್ಯಕರ್ತರ ಆಕ್ರೋಶ ವ್ಯಕ್ತಪಡಿಸಿದ್ದು, ಕಳೆದ ನಾಲ್ಕು ದಿನಗಳ ಹಿಂದೆ ಮುರಡಿ ಕೆರೆಗೆ ಬಾಗಿನ ಅರ್ಪಿಸಿದ್ದ ಸಚಿವ ಹಾಲಪ್ಪ ಆಚಾರ್ ಅವರನ್ನು ನೋಡಿ ಕಲಿಯಿರಿ ಎಂದು ಟ್ರೋಲ್ ಮಾಡಿದ್ದಾರೆ. ಸಚಿವ ಹಾಲಪ್ಪ ಆಚಾರ್ ಬರಿಗಾಲಲ್ಲೇ ಬಾಗಿನ ಅರ್ಪಣೆ ಮಾಡಿದ್ರೂ, ಆದರೆ ರಾಯರೆಡ್ಡಿ ಅವರು ಚಪ್ಪಲಿ, ಸಾಕ್ಸ್ ಬಿಚ್ಚದೆ ಬಾಗಿನ ಅರ್ಪಿಸಿದ್ದಾರೆ. ಜನರಿಗೆ ಹಾಲಪ್ಪನಂತಹ ಜನಸೇವಕ ಬೇಕಾ ಅಥವಾ ರಾಯರೆಡ್ಡಿಯಂತಹ ಹೈಟೆಕ್ ರಾಜಕಾರಣಿ ಬೇಕಾ ಎಂದು ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರಶ್ನಿಸಿದ್ದಾರೆ.

Edited By :
PublicNext

PublicNext

08/10/2022 09:29 am

Cinque Terre

27.19 K

Cinque Terre

1