ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಪ್ಪಳ: ಹದಗೆಟ್ಟ ರಸ್ತೆಯಲ್ಲಿ ನಡೆದಾಡಿಸಿ ಶಾಸಕನಿಗೆ ಸತ್ಯದರ್ಶನ!; ಜನರ ಪ್ರಶ್ನೆಗೆ ದಿವ್ಯಮೌನ

ಕೊಪ್ಪಳ: ಅರ್ಧ ಕಿ.ಮೀ. ಗೂ ಹೆಚ್ಚು ಹದಗೆಟ್ಟ ರಸ್ತೆಯಲ್ಲಿ ಶಾಸಕನನ್ನ ನಡೆದಾಡಿಸಿ ರಸ್ತೆಯ ವಾಸ್ತವತೆಯನ್ನು ಗ್ರಾಮಸ್ಥರೇ ತಿಳಿಸಿಕೊಟ್ಟ ಘಟನೆ ಕೊಪ್ಪಳದಲ್ಲಿ ನಡೆದಿದೆ!

ಕೊಪ್ಪಳದ ಕಾರಟಗಿ ತಾಲೂಕಿನ ಚಳ್ಳೂರು ಕ್ಯಾಂಪ್ ನಲ್ಲಿ ಈ ಪ್ರಸಂಗ ನಡೆದಿದ್ದು, ಹದಗೆಟ್ಟ ರಸ್ತೆ ತೋರಿಸಿ ಬಿಜೆಪಿ ಶಾಸಕನಿಗೆ ಜನರು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ.ಕೊಪ್ಪಳದ ಕನಕಗಿರಿ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ್ ದಡೇಸೂಗೂರು ಬಹುದಿನಗಳ ನಂತರ ಗ್ರಾಮಕ್ಕೆ ಭೇಟಿ ನೀಡಿದ್ದರು‌.

ಇದೇ ವೇಳೆ ಗ್ರಾಮಸ್ಥರು, ವಿದ್ಯಾರ್ಥಿಗಳು "ನಮ್ಮೂರಿಗೆ ಬಸ್ ಇಲ್ಲಾ, ಬಸ್ ಓಡಿಸಿ ಸರ್" ಎಂದಿದ್ದಾರೆ‌. ಇದೇ ವೇಳೆ ಶಾಲಾ ಮಕ್ಕಳಿಗೆ ಶಾಸಕ ಬಸವರಾಜ್ ಉಡಾಫೆ ಉತ್ತರ ನೀಡಿದ್ದು, ಗ್ರಾಮಸ್ಥರೇ ಮಕ್ಕಳಿಗೆ ತರಬೇತಿ ಕೊಟ್ಟಿದ್ದಾರೆ. ಅದ್ಕೆ ಈ ರೀತಿ ಪ್ರಶ್ನೆ ಕೇಳ್ತಿದ್ದಾರೆ ಎಂದಿದ್ದಾರೆ.

ಇದಾದ ಬಳಿಕ ನಾವು ಮಕ್ಕಳಿಗೆ ಮಾತನಾಡಲು ತರಬೇತಿ ಕೊಟ್ಟಿದ್ದೀವಾ!? ನಿಮ್ಮ ಮಾತು ವಾಪಸ್ ತಗೊಳ್ಳಿ ಎಂದು ಶಾಸಕನ ಮೈಚಳಿ ಗ್ರಾಮಸ್ಥರು ಬಿಡಿಸಿದರು. ಜಾಗೃತಾ ಗ್ರಾಮಸ್ಥರ ಪ್ರಶ್ನೆಗಳಿಗೆ ತುಟಿ ಬಿಚ್ಚದೆ ಶಾಸಕರು ಮೌನಕ್ಕೆ ಶರಣಾಗಿದ್ದರು.

Edited By : Manjunath H D
PublicNext

PublicNext

30/09/2022 06:35 pm

Cinque Terre

32.24 K

Cinque Terre

1