ಕೊಪ್ಪಳ: ಜಿಲ್ಲೆಯಾದ್ಯಂತ ನಿನ್ನೆಯಿಂದಲೇ ಅಧಿಕ ಮಳೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ನಟ ಯಶ್ ಅಭಿವೃದ್ಧಿ ಪಡಿಸಿದ್ದ ತಲ್ಲೂರು ಕೆರೆಯಲ್ಲಿ ಕೋಡಿ ಬಿದ್ದಿದೆ. ಜಿಲ್ಲೆಯ ಯಲಬುರ್ಗಾ ತಾಲೂಕಿನ ತಲ್ಲೂರು ಕೆರೆಯನ್ನು 2016 ನಟ ಯಶ್ ಅಭಿವೃದ್ದಿಸಿದ್ದರು. ಯಶೋಮಾರ್ಗ ಫೌಂಡೇಶನ್ ನಿಂದ ಅಭಿವೃದ್ದಿ ಪಡಿಸಿದ್ದ ಕೆರೆ ಇದಾಗಿದ್ದು, ಅಭಿವೃದ್ದಿ ಪಡಿಸಿದ ನಂತರ ಇದೇ ಮೊದಲು ಬಾರೀಗೆ ಕೆರೆಯಲ್ಲಿ ಕೋಡಿ ಬಿದ್ದಿದೆ. ಈಗ ಮತ್ತೆ ಕೆರೆ ಭರ್ತಿಯಾಗಿ ಕೋಡಿ ಬಿದ್ದಿದ್ದಕ್ಕೆ ಗ್ರಾಮಸ್ಥರಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.
PublicNext
30/09/2022 11:20 am