ರಾಜ್ಯಾದ್ಯಂತ ರಾಷ್ಟ್ರೀಯ ತನಿಖಾ ದಳದ ತಂಡ ಪ್ರವೀಣ್ ನೆಟ್ಟಾರು ಸೇರಿದಂತೆ ಕೆ.ಜಿ.ಹಳ್ಳಿ ಮತ್ತು ಡಿ.ಜೆ ಹಳ್ಳಿ ಗಲಭೆ ಪ್ರಕರಣ ಸಂಬಂಧಿಸಿದಂತೆ ಹಲವಾರು ಶಂಕಿತ ಉಗ್ರರನ್ನು ಮತ್ತು ಆರೋಪಿಗಳು ಬಂಧಿಸುತ್ತಿದ್ದಾರೆ.
ಇದೀಗ ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ಎನ್‌ಐಎ ತಂಡದ ಸೂಚನೆಯಂತೆ ಗಂಗಾವತಿ ಪೊಲೀಸರು ಪಿಎಫ್ಐ ಜಿಲ್ಲಾಧ್ಯನನ್ನು ಬಂಧಿಸಿ ಕೆ.ಜಿ ಹಳ್ಳಿಗೆ ಕಳುಹಿಸಿದ್ದಾರೆ. ಗಂಗಾವತಿ ನಗರದ ಅಬ್ದುಲ್ ಫಯಾಜ್ ಬಂಧಿತ ಆರೋಪಿಯಾಗಿದ್ದು, ಬೆಳಗಿನ ಜಾವ ಮೂರು ಗಂಟೆಗೆ ಪೊಲೀಸರು ಮನೆಗೆ ಹೋಗಿ ಬಂಧಿಸಿದ್ದಾರೆ. ಆರೋಪಿಯ ವಿಚಾರಣೆ ಮುಂದುವರೆದಿದ್ದು, ತನಿಖೆ ಚುರುಕು ಪಡೆದಿದೆ.
PublicNext
22/09/2022 02:45 pm