ದೇವರ ಉತ್ಸವ ಮೆರವಣಿಗೆ ವೇಳೆ ಎರಡು ಸಮುದಾಯದ ನಡುವೆ ಮಾರಾಮರಿ ನಡೆದಿರುವ ಘಟನೆ ಕೋಲಾರ ತಾಲೂಕಿನ ದಾನವಹಳ್ಳಿ ಗ್ರಾಮದಲ್ಲಿ ನಡೆದಿದೆ. ದಲಿತರ ಮನೆಗಳಿಗೂ ಉತ್ಸವ ಮೂರ್ತಿ ಮೆರವಣೆಗೆ ಬರಬೇಕು ಅನ್ನುವ ವಿಚಾರಕ್ಕೆ ಗಲಾಟೆ ನಡೆದಿದೆ.
ಎರಡು ಗುಂಪಿನವರು ಸೇರಿ ಒಟ್ಟು ಐವರಿಗೆ ಗಾಯವಾಗಿದ್ದು, ಗಾಯಾಳುಗಳು ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ವೇಮಗಲ್ ಪೊಲೀಸ್ ಠಾಣೆಯಲ್ಲಿ ಒಂದು ಗುಂಪಿನ ಮೇಲೆ ಜಾತಿ ನಿಂದನೆ ಹಾಗೂ ಮತ್ತೊಂದು ಗುಂಪಿನ ಮೇಲೆ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.
ವರದಿ : ರವಿ ಕುಮಾರ್, ಕೋಲಾರ.
PublicNext
06/10/2022 12:09 pm