ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ - ಸಿರಿವಂತರಿಗೆ ಬಿಪಿಎಲ್ ಕಾರ್ಡ್ ಬೇಕಿಲ್ಲ - ಕೊತ್ತೂರು ಮಂಜುನಾಥ್

ಕೋಲಾರ : ಸಿರಿವಂತರಿಗೆ ಬಿ.ಪಿ.ಎಲ್ ಕಾರ್ಡ್ ಬೇಕಿಲ್ಲ, ಕಾರು ಹೊಂದಿದ್ದವರು, ಐಟಿ ಟ್ಯಾಕ್ಸ್ ಕಟ್ಟುವವರಿಗೆ ಕಾರ್ಡ್ ಬೇಕಿಲ್ಲ, ರಾಜ್ಯ ಸರ್ಕಾರದ ನಿರ್ಧಾರಕ್ಕೆ ನನ್ನ ಸಹಮತ ಇದೆ ಇದು ಒಳ್ಳೆಯ ನಿರ್ಧಾರ ಎಂದು ಕೋಲಾರದಲ್ಲಿ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ಹೇಳಿದ್ರು. ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ71 ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಲಾರದಲ್ಲು 6400 ಕಾರ್ಡ್ಗಳು ರದ್ದಾಗಿರೊದು ನಿಜ, ಕೇವಲ ಆರೋಗ್ಯ ಉದ್ದೇಶಕ್ಕೆ ಬಿ.ಪಿ.ಎಲ್ ಕಾರ್ಡ್ ಬೇಕಿಲ್ಲ, ಅದಕ್ಕಾಗಿಯೆ ಸಹಕಾರ ರಂಗದಲ್ಲಿ ವಿಮೆ ಅವಕಾಶಗಳು ಇದೆ.

ರಾಜ್ಯದಲ್ಲಿ 11 ಲಕ್ಷ ಕಾರ್ಡ್ ವರ್ಗಾವಣೆ ಆಗುವುದರಲ್ಲಿ ಬಡವರಿಲ್ಲ ಅಕ್ಕಿ ಕೇಂದ್ರ ಸರ್ಕಾರ ಕೊಟ್ಟರು, ಅದು ನಮ್ಮ ದುಡ್ಡೆ ಅಲ್ವೆ, ಅದು ಸರಿಯಾಗಿ ನೀಡ್ತಿಲ್ಲ. ಅಕ್ಕಿ ಎಲ್ಲರಿಗೂ ಕೊಡ್ತಾರಾ ಹೇಳಿ, ಹಾಗಂತ ಒಂದು ಪತ್ರ ಕೊಡಲಿ, ಎಲ್ಲರಿಗೂ ಅಕ್ಕಿ ಕೊಡ್ತೀವಿ, ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಹೇಳಿಕೆಗೆ ನಾನು ಪ್ರತಿಕ್ರಿಯೆ ಕೊಡಲ್ಲ ಬಡವರು ಒಂದೇ ಒಂದು ಬಿ.ಪಿ.ಎಲ್ ಕಾರ್ಡ್ ರದ್ದಾಗಿದ್ದರೆ ಹೇಳಿ, ನಾನು ಮಾಡಿಸಿಕೊಡ್ತೀನಿ ನಿಜವಾದ ಬಡವರಿಗೆ ಇಂದೂ ಬಿ.ಪಿ.ಎಲ್ ಕಾರ್ಡ್ ಇಲ್ಲ, ನಿಜವಾದ ಬಡವರಿಗೆ ಅನ್ಯಾಯ ಅಗ್ತಿದೆ ಎಂದ್ರು.

Edited By : PublicNext Desk
Kshetra Samachara

Kshetra Samachara

18/11/2024 04:21 pm

Cinque Terre

380

Cinque Terre

0

ಸಂಬಂಧಿತ ಸುದ್ದಿ