ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ : ಸಿಎಂ ಗೆ ಲೋಕಾಯುಕ್ತ ಕ್ಲೀನ್ ಚೀಟ್ ಕೊಡ್ತಾರೆ ಅನ್ನೋ ನಿರೀಕ್ಷೆ ಇತ್ತು - ಸಚಿವ ದಿನೇಶ್ ಗುಂಡುರಾವ್

ಕೋಲಾರ : ಸಿಎಂ ಸಿದ್ದರಾಮಯ್ಯ ಏನು ತಪ್ಪು ಮಾಡಿಲ್ಲ‌ ಅಂತ ನಮಗೆಲ್ಲ ಗೊತ್ತಿದೆ. ಹಾಗಾಗಿ ಲೋಕಾಯುಕ್ತ ಕ್ಲೀನ್ ಚೀಟ್ ಕೊಡ್ತಾರೆ ಅನ್ನೋ ನಿರೀಕ್ಷೆ ಇತ್ತು ಎಂದು ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಅವರು ಹೇಳಿದರು.

ನಗರದ ಎಸ್ ಎನ್ ಆರ್ ಜಿಲ್ಲಾಸ್ಪತ್ರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವ್ರು, ಇಡಿ, ಸಿಬಿಐ ಐಟಿ ಎಲ್ಲವನ್ನೂ ಬಿಡಲಿ ಅದನ್ನು ಎದುರಿಸಲಿಕ್ಕೆ ನಾವೆಲ್ಲರು ತಯಾರಿದ್ದೆವೆ. ಸಿಎಂ ಸಿದ್ದರಾಮಯ್ಯ ತಪ್ಪು ಮಾಡಿಲ್ಲ ಅನ್ನೋ ಭರವಸೆ ನಂಬಿಕೆ ಎಲ್ಲವು ಇದೆ ಜನರು ಅದನ್ನೆ ನಂಬಿದ್ದಾರೆ ಎಂದು ಹೇಳಿದರು. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಎಷ್ಟು ಪ್ರಕರಣ ಸಿಬಿಐಗೆ ಕೊಟ್ಟಿದ್ದಾರೆ. ಒಂದೇ ಒಂದು ಕೇಸ್ ನ್ನು ಬಿಜೆಪಿಯವರು ಸಿಬಿಐಗೆ ಕೊಟ್ಟಿಲ್ಲ. ಬಿಜೆಪಿಯವರಿಗೆ ಒಂದು ಮಾನದಂಡ ಬೇರೆಯವರಿಗೆ ಮಾನದಂಡ ಎಂದು ಹೇಳಿದರು.

Edited By : PublicNext Desk
PublicNext

PublicNext

24/01/2025 08:04 pm

Cinque Terre

32.41 K

Cinque Terre

1

ಸಂಬಂಧಿತ ಸುದ್ದಿ