ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧ ಎಂದ ವಾಟ್ಸ್ಆ್ಯಪ್

ನವದೆಹಲಿ: ತನ್ನ ಗೌಪ್ಯತೆ ನೀತಿಯಲ್ಲಿನ ಬದಲಾವಣೆಗಳನ್ನು ಹಿಂತೆಗೆದುಕೊಳ್ಳುವಂತೆ ವಾಟ್ಸ್ಆ್ಯಪ್ ಗೆ ಭಾರತ ಸರ್ಕಾರ ಗಡುವು ನೀಡಿತ್ತು. ಪ್ರಸ್ತಾವಿತ ಬದಲಾವಣೆಯು ಬಳಕೆದಾರರ ಡೇಟಾವನ್ನು ಫೇಸ್‌ಬುಕ್‌ನೊಂದಿಗೆ ಹಂಚಿಕೊಳ್ಳುವ ಸಾಮರ್ಥ್ಯ ವಿಸ್ತರಿಸುವ ಯಾವುದೇ ಉದ್ದೇಶ ಹೊಂದಿಲ್ಲ. ಹಾಗೂ ಈ ವಿಷಯದ ಕುರಿತು ಭಾರತ ಸರ್ಕಾರದ ಯಾವುದೇ ಪ್ರಶ್ನೆಗಳಿಗೆ ಉತ್ತರಿಸಲು ನಾವು ತಯಾರಿದ್ದೇವೆ ಎಂದು ವಾಟ್ಸ್ಆ್ಯಪ್ ಹೇಳಿದೆ.

ಸೇವಾ ನಿಯಮಗಳು ಮತ್ತು ಗೌಪ್ಯತೆ ನೀತಿಯಲ್ಲಿನ "ಏಕಪಕ್ಷೀಯ" ಬದಲಾವಣೆಗಳ ಕುರಿತು ಭಾರತ ಸರ್ಕಾರ ಮಂಗಳವಾರ ವಾಟ್ಸ್ಆ್ಯಪ್‌ಗೆ 14 ಪ್ರಶ್ನೆಗಳನ್ನು ಕೇಳಿದೆ.

ವಾಟ್ಸಾಪ್ ಯಾವಾಗಲೂ ವೈಯಕ್ತಿಕ ಸಂದೇಶಗಳನ್ನು ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್‌ನೊಂದಿಗೆ ರಕ್ಷಿಸುತ್ತದೆ, ಇದರಿಂದಾಗಿ ವಾಟ್ಸ್ಆ್ಯಪ್ ಅಥವಾ ಫೇಸ್‌ಬುಕ್ ಎರಡೂ ಅವುಗಳನ್ನು ನೋಡುವುದಿಲ್ಲ ನಾವು ತಪ್ಪು ಮಾಹಿತಿಯ ಪರಿಹಾರಕ್ಕೆ ಯತ್ನಿಸುತ್ತಿದ್ದೇವೆ. ಮತ್ತು ಯಾವುದೇ ಪ್ರಶ್ನೆಗಳಿಗೆ ಉತ್ತರಿಸಲು ನಾವು ಮುಕ್ತವಾಗಿದ್ದೇವೆ" ಎಂದು ವಾಟ್ಸ್ಆ್ಯಪ್ ವಕ್ತಾರರು ಹೇಳಿದ್ದಾರೆ.

Edited By : Nagaraj Tulugeri
PublicNext

PublicNext

20/01/2021 07:28 pm

Cinque Terre

98.9 K

Cinque Terre

1

ಸಂಬಂಧಿತ ಸುದ್ದಿ