ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರೈಲುಗಳು ತಡವಾದ್ರೆ ಪ್ರಯಾಣಿಕರಿಗೆ ಪರಿಹಾರ ನೀಡಬೇಕು: ಸುಪ್ರೀಂ

ನವದೆಹಲಿ: ರೈಲುಗಳು ತಡವಾದರೆ ಪ್ರಯಾಣಿಕರಿಗೆ ಪರಿಹಾರ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಎಂ.ಆರ್ ಶಾ ಮತ್ತು ಅನಿರುದ್ಧ ಬೋಸ್ ಅವರ ನ್ಯಾಯಪೀಠ, ಪ್ರಯಾಣಿಕರ ಸಮಯವು ಅಮೂಲ್ಯವಾದುದು. ರೈಲು ಸೇವೆಗಳಲ್ಲಿ ಇನ್ನು ಮುಂದೆ ವ್ಯಾತ್ಯಾಸಗಳಿದ್ದಲ್ಲಿ ಮುಂಚಿವಾಗಿ ಪ್ರಯಾಣಿಕರಿಗೆ ತಿಳಿಸಬೇಕು. ತಿಳಿಸದೆ ಇದ್ದರೆ ರೈಲ್ವೆ ಪ್ರಯಾಣಿಕರಿಗೆ ಪರಿಹಾರ ನೀಡಬೇಕು ಎಂದು ತಿಳಿಸಿದೆ. ಈ ಮೂಲಕ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ(ಎನ್‌ಸಿಡಿಆರ್‌ಸಿ) ತೀರ್ಪಿನ ವಿರುದ್ಧ ಉತ್ತರ ಪಶ್ಚಿಮ ರೈಲ್ವೆ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿದೆ.

ಈ ಮೂಲಕ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ(ಎನ್ ಸಿಡಿಆರ್ ಸಿ) ತೀರ್ಪಿನ ವಿರುದ್ಧ ಉತ್ತರ ಪಶ್ಚಿಮ ರೈಲ್ವೆ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

2016ರಲ್ಲಿ ಸಂಜಯ್ ಶುಕ್ಲಾ ಹಾಗೂ ಇತರ ಮೂವರು ಕುಟುಂಬಸ್ಥರ ಜೊತೆಗೆ ಜಮ್ಮು-ಕಾಶ್ಮೀರಕ್ಕೆ ಪ್ರಯಾಣಿಸುವ ವೇಳೆ ರೈಲು ನಾಲ್ಕು ಗಂಟೆ ವಿಳಂಬವಾಗಿದ್ದಕ್ಕೆ ಪರಿಹಾರ ಕೋರಿ ಎನ್‌ಸಿಡಿಆರ್‌ಸಿ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಎನ್‌ಸಿಡಿಆರ್‌ಸಿ ಪ್ರಯಾಣಿಕರಿಗೆ ಪರಿಹಾರ ನೀಡಬೇಕು ಎಂದು ಆದೇಶ ನೀಡಿತ್ತು. ಇದೀಗ ಸುಪ್ರೀಂ ಕೋರ್ಟ್ ಕೂಡ ಆದೇಶವನ್ನು ಎತ್ತಿಹಿಡಿದಿದೆ. ಸಂಜಯ್ ಶುಕ್ಲಾ ಹಾಗೂ ಇತರ ಮೂವರು ಕುಟುಂಬದವರು ರೈಲು ವಿಳಂಬದಿಂದಾಗಿ ಅಂದು ವಿಮಾನಯಾನ ತಪ್ಪಿಸಿಕೊಂಡರು. ಇದರಿಂದ ದುಬಾರಿ ಹಣ ಕೊಟ್ಟು ಟ್ಯಾಕ್ಸಿ ಮೂಲಕ ಶ್ರೀನಗರಕ್ಕೆ ತೆರಳಿದ್ದರು.

Edited By : Vijay Kumar
PublicNext

PublicNext

09/09/2021 08:33 am

Cinque Terre

80.3 K

Cinque Terre

4