ನವದೆಹಲಿ: ಉಕ್ರೇನ್-ರಷ್ಯಾ ನಡುವಿನ ಘೋರ ಕದನಕ್ಕೆ ಅಮಾಯಕ ಜೀವಗಳು ಬಲಿಯಾಗುತ್ತಿವೆ. ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ಹಲವು ದೇಶಗಳ ನಾಗರಿಕರು ಹಾಗೂ ವಿದ್ಯಾರ್ಥಿಗಳನ್ನು ವಾಪಸ್ ತಾಯ್ನಾಡಿಗೆ ಕರೆತರುವ ಪ್ರಯತ್ನವನ್ನು ಆಯಾ ದೇಶಗಳು ಮಾಡುತ್ತಿವೆ. ಭಾರತದಿಂದಲೂ 'ಆಪರೇಷನ್ ಗಂಗಾ' ಹೆಸರಿನ ವಿಮಾನಗಳು ಉಕ್ರೇನ್ ವಾಯುಮಾರ್ಗದತ್ತ ಹಾರಿ ಸಾವಿರಾರು ಭಾರತೀಯರನ್ನು ಯುದ್ಧಭೂಮಿಯಿಂದ ವಾಪಸ್ ಕರೆತಂದಿವೆ. ಈಗ ಭಾರತದ ವಾಯುಸೇನೆ ಕೂಡ ಈ ಕಾರ್ಯಾಚರಣೆಗೆ ಸಜ್ಜಾಗಿದೆ. ಇಂದಿನಿಂದ ಆಪರೇಷನ್ ಗಂಗಾ ಯೋಜನೆ ಅಡಿ ಭಾರತೀಯ ವಾಯುಸೇನೆ ಸಿ-17 ವಿಮಾನಗಳನ್ನು ನಿಯೋಜಿಸುವ ಸಾಧ್ಯತೆ ಇದೆ
ಏನಿದು C-17 ಗ್ಲೋಬ್ ಮಾಸ್ಟರ್...?
ಅಫ್ಘಾನಿಸ್ತಾನದಲ್ಲಿ ಅಶಾಂತಿಯ ಸಂದರ್ಭದಲ್ಲಿ C-17 ಗ್ಲೋಬ್ ಮಾಸ್ಟರ್ 640 ಪ್ರಯಾಣಿಕರನ್ನು ಹೊತ್ತು ತಾಯ್ನಾಡಿಗೆ ಹಿಂದಿರುಗಿತ್ತು. ಭಾರತೀಯ ವಾಯುಪಡೆಯು 2 ಬಾರಿ ಭಾರತೀಯರನ್ನು ಕಾಬೂಲ್‌ನಿಂದ C-17 ಗ್ಲೋಬ್ ಮಾಸ್ಟರ್ ಮೂಲಕ ಸ್ಥಳಾಂತರ ಮಾಡಿದೆ. ಸದ್ಯ ಭಾರತವು 11 ಸಿ-17 ಗ್ಲೋಬ್ ಮಾಸ್ಟರ್ ವಿಮಾನಗಳ ಬಲ ಹೊಂದಿದೆ. ಈ ವಿಮಾನದ ಹೊರ ರಚನೆಯು ಎಷ್ಟು ಪ್ರಬಲವೆಂದರೆ ಇದರ ಮೇಲೆ ರೈಫಲ್ ಮತ್ತು ಸಣ್ಣ ಶಸ್ತ್ರಾಸ್ತ್ರಗಳಿಂದ ದಾಳಿ ಮಾಡಿದ್ರೂ ಯಾವುದೇ ಪರಿಣಾಮ ಬೀರುವುದಿಲ್ಲ.
PublicNext
02/03/2022 12:43 pm