ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಪಂಚಮಿ ಸಂಭ್ರಮ ಕಸಿದುಕೊಂಡ ವರುಣ; ಚೇರ್ ಮೇಲೆ ರಾತ್ರಿ ಕಳೆದ ಆಪರೇಷನ್ ಆದ ವ್ಯಕ್ತಿ!

ಗದಗ : ಕಳೆದ ಮೂರು ದಿನದಿಂದ ಗದಗ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಮಳೆ ಸುರಿಯುತ್ತಿದ್ದು, ಅವಾಂತರ ಸೃಷ್ಟಿಯಾಗಿದೆ. ಭಾನುವಾರ ರಾತ್ರಿ ಸುರಿದ ಮಳೆಯಿಂದಾಗಿ ಗದಗ ನಗರದ ಎಸ್.ಎಂ.ಕೃಷ್ಣ ಬಡಾವಣೆ ಆಟೋ ಕಾಲೋನಿಯಲ್ಲಿ 50 ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ.

ಪಂಚಮಿ ಹಬ್ಬದ ತಯಾರಿಯಲ್ಲಿರಬೇಕಿದ್ದ ಜನರು ಮಳೆ ನೀರು ಹೊರ ಹಾಕುವಲ್ಲಿ ನಿರತರಾಗಿದ್ದರು. ರಾತ್ರಿ 9 ಗಂಟೆಯಿಂದ ಬೆಟಗೇರಿ ಭಾಗದಲ್ಲಿ ನಿರಂತರ ಮಳೆಯಾದ ಕಾರಣ ಕೆರೆ ತುಂಬಿದೆ. ಉಕ್ಕಿ ಹರಿದ ನೀರು ಕಾಲುವೆ ಮೂಲಕ ಬಡಾವಣೆಗೆ ನುಗ್ಗಿತ್ತು. ರಾತ್ರಿಯಿಡಿ ನೀರು ಹೊರ ಹಾಕಲು ಜನ ಪರದಾಡಿದರು.

ಬಡಾವಣೆಯ 50 ಕ್ಕೂ ಹೆಚ್ಚು ಮನೆಗಳಿಗೆ ನೀರು ಹೊಕ್ಕಿದೆ.. ಎಸ್ ಎಂ ಕೃಷ್ಣ ಬಡಾವಣೆಯ ಆಟೋ ಕಾಲೊನಿ ತಗ್ಗು ಪ್ರದೇಶದಲ್ಲಿರೋದ್ರಿಂದ ಅತಿ ಹಚ್ಚು ನೀರು ಇಲ್ಲೇ ಹರಿದು ಬರುತ್ತೆ.. ರಾತ್ರಿ ಏಕಾ ಏಕಿ ನೀರು ನುಗ್ಗಿದ್ರಿಂದ ಮನೆಯಲ್ಲಿದ್ದ ಸಾಮಾನುಗಳನ್ನ ಮೇಲೆತ್ತಿಡಲಾಗ್ಲಿಲ್ಲ.. ಇದ್ರಿಂದಾಗಿ ದವಸಧಾನ್ಯ ತೊಯ್ದಿದ್ದು, ಮಕ್ಕಳ ಪಠ್ಯ ಪುಸ್ತಕಗಳೂ ತೇವಗೊಂಡಿವೆ. ಬಡಾವಣೆ ಮಕ್ಕಳು ಶಾಲೆಗೆ ಹೋಗಲಾರದೇ ಮನೆಯಲ್ಲೇ ಕೂತಿದ್ರು..

ರಾತ್ರಿ ಏಕಾಏಕಿ ಮಹಗುಂಡಪ್ಪ ಕಳಗಣ್ಣನವರ್ ಅನ್ನೋರ ಮನೆಗೂ ನೀರು ನುಗ್ಗಿತ್ತು. ಮಹಗುಂಡಪ್ಪ ಅವರಿಗೆ ಕಳೆದ ಕೆಲ ತಿಂಗಳ ಹಿಂದೆ ಕಾಲು ಆಪರೇಷನ್ ಆಗಿದ್ರಿಂದ ವೈದ್ಯರು ಬೆಡ್ ರೆಸ್ಟ್ ಹೇಳಿದ್ರು. ನೀರು ತಾಗಿಸದಂತೆ ಸಲಹೆ ನೀಡಿದ್ರಂತೆ.. ಆದ್ರೆ, ಮನೆಯಲ್ಲಿ ನೀರು ನುದ್ದಿ ಮಹಗುಂಡಪ್ಪ ಚೇರ್ ಮೇಲೆ ಕೂತು ರಾತ್ರಿ ಕಳೆದಿದ್ದಾರೆ.. ಬೆಳಗಿನ ಜಾವ ಮೂರು ಗಂಟೆಗೆ ಕೊಂಚಮಟ್ಟಿಗೆ ನೀರು ಇಳಿದಿದೆ.. ಆಗ ಸ್ವಲ್ಪ ನಿದ್ದೆ ಮಾಡಿದ್ವಿ ಅಂತಾರೆ ಮಹಗುಂಡಪ್ಪ..

ಮನೆಗೆ ನೀರು ನುಗ್ಗಿದ್ರಿಂದ ರಾತ್ರಿ ಜಾಗರಣೆ ಮಾಡಿದ ಮಹಿಳೆಯರು, ಬೆಳಗಿನಜಾವ ತಿಂಡಿ ತಿಂದಿರಲಿಲ್ವಂತೆ.. ನೀರಿನ ಮಟ್ಟ ಕಡಿಮೆ ಆದ್ಮೇಲೆ ಮನೆ ಸ್ವಚ್ಛತೆಗೊಳಿಸಲು ಮಹಿಳೆಯರು ಮುಂದಾಗಿದ್ರು.. ಅಡುಗೆ ಮನೆಯಲ್ಲಿ ನೀರು ತುಂಬಿದ್ರಿಂದ ಉಪಾಹಾರ ತಯಾರು ಮಾಡೋದಕ್ಕೂ ಸಾಧ್ಯವಾಗಿರಲಿಲ್ಲ.. ಅಸಹಾಯಕತೆಯಿಂದ ಮಹಿಳೆಯರು ಮಳೆ ಅಂಗಳದಲ್ಲೇ ನಿಂತುಕೊಂಡಿದ್ರು..

Edited By : Somashekar
PublicNext

PublicNext

02/08/2022 09:37 am

Cinque Terre

90.66 K

Cinque Terre

0

ಸಂಬಂಧಿತ ಸುದ್ದಿ