ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ರಾತ್ರೋರಾತ್ರಿ ನೂರಾರು ಗುಡಿಸಲು ತೆರವುಗೊಳಿಸಿದ ಜಿಲ್ಲಾಡಳಿತ: ಆಕ್ರೋಶಗೊಂಡ ಸ್ಥಳೀಯರು!

ದಾವಣಗೆರೆ: ಸರ್ಕಾರಿ ಜಮೀನಿನಲ್ಲಿ ಗುಡಿಸಲು ಹಾಕಿಕೊಂಡು ಜೀವನ ನಡೆಸುತ್ತಿದ್ದ ನೂರಾರು ಮಂದಿಯನ್ನು ರಾತ್ರೋರಾತ್ರಿ ತೆರವುಗೊಳಿಸಿದ ಘಟನೆ ನಗರದ ಹೊರವಲಯದ ಆವರಗೆರೆ ದನವಿಓಣಿಯಲ್ಲಿ ನಡೆದಿದೆ.

ರಾತ್ರೋರಾತ್ರಿ ಗುಡಿಸಲುಗಳನ್ನು ಜಿಲ್ಲಾಡಳಿತ ನೇತೃತ್ವದಲ್ಲಿ ಹತ್ತಾರು ಜೆಸಿಬಿ ಹಾಗೂ ಇನ್ನೂರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಸಹಾಯದಿಂದ ತೆರವುಗೊಳಿಸುವ ಕಾರ್ಯ ನಡೆದಿದೆ. ತೆರವು ಮಾಡಲು ಆಗಮಿಸಿದ ವೇಳೆ ಗುಡಿಸಲು ವಾಸಿಗಳು ಅಡ್ಡಿ‌ಪಡಿಸಿದ್ರು.

ಈ ಹಿನ್ನೆಲೆಯಲ್ಲಿ ಹತ್ತಕ್ಕೂ ಹೆಚ್ಚು ಸ್ಥಳೀಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಮತ್ತೆ ಅಲ್ಲಿ ಗುಡಿಸಲು ಹಾಕುತ್ತೇವೆ. ನಮಗೆ ಮನೆಗಳಿಲ್ಲ. ಬಾಡಿಗೆ ಕಟ್ಟಿ ಬದುಕುವಷ್ಟು ಶಕ್ತಿ ಇಲ್ಲ. ಮತ್ತೆ ಅಲ್ಲಿ ಗುಡಿಸಲು ಹಾಕುತ್ತೇವೆ ಎಂದು ಪಟ್ಟು ಸ್ಥಳೀಯರು ಪಟ್ಟು ಹಿಡಿದ ಪರಿಣಾಮ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣ ಆಗಿತ್ತು‌. ಜೆಸಿಬಿ ವಾಹನ ಚಾಲಕನ ಮೇಲೆ ಸ್ಥಳೀಯರು ಹಲ್ಲೆ ಮಾಡಿದ್ದಾರೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ.

Edited By : Manjunath H D
PublicNext

PublicNext

04/03/2022 08:47 pm

Cinque Terre

135.93 K

Cinque Terre

5

ಸಂಬಂಧಿತ ಸುದ್ದಿ