ಬೆಂಗಳೂರು- ಸಾರಿಗೆ ನೌಕರರ ಪ್ರತಿಭಟನೆ ನಾಳೆಯೂ ಮುಂದುವರೆಯುವ ಸಾಧ್ಯತೆ ಇದೆ. ನೌಕರರ ಪರ ಸಂಘಟನೆಗಳು ಹಾಗೂ ಸರ್ಕಾರದ ನಡುವಿನ ಮಾತುಕತೆ ಇತ್ಯರ್ಥಕ್ಕೆ ಬಂದಿಲ್ಲ. ಹೀಗಾಗಿ ಪಟ್ಟು ಬಿಡದ ನೌಕರರು ನಾಳೆಯೂ ತಮ್ಮ ಪ್ರತಿಭಟನೆ ಮುಂದುವರೆಸುವ ಸಾಧ್ಯತೆ ಇದೆ.
ಈ ನಡುವೆ ಪ್ರಯಾಣಿಕರು ಬಸ್ ಸೌಲಭ್ಯ ಇಲ್ಲದೇ ಬಸ್ ನಿಲ್ದಾಣಗಳಲ್ಲೇ ರಾತ್ರಿ ಕಳೆಯುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಖಾಸಗೀ ಬಸ್ ಹಾಗೂ ಟ್ಯಾಕ್ಸಿ ಚಾಲಕರು ದುಪ್ಪಟ್ಟು ಹಣ ಕೇಳುವ ಬಗ್ಗೆ ತಿಳಿದುಬಂದಿದೆ. ನೌಕರರು ಹಾಗೂ ಸರ್ಕಾರದ ನಡುವಿನ ಈ ಹಗ್ಗ ಜಗ್ಗಾಟ ನಾಳೆಯಾದ್ರೂ ಕೊನೆಯಾಗುತ್ತಾ ಕಾದು ನೋಡಬೇಕಿದೆ.
PublicNext
11/12/2020 10:58 pm