ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ ಯುವತಿಯ ಶಪಥಕ್ಕೆ ಸಿಕ್ತು ಜಯ: ಗ್ರಾಮಕ್ಕೆ ರಸ್ತೆ ಆಯ್ತು, ಬಸ್ಸೂ ಬಂತು

ದಾವಣಗೆರೆ: ಊರಿಗೆ ರಸ್ತೆ ಕಲ್ಪಿಸುವವರೆಗೂ ಮದುವೆ ಆಗುವುದಿಲ್ಲ ಎಂದು ಶಪಥ ಮಾಡಿದ್ದ ಯುವತಿಗೆ ಜಯ ಸಿಕ್ಕಿದೆ.

ಹೌದು. ಮಾಯಕೊಂಡ ವಿಧಾನಸಭಾ ಕ್ಷೇತ್ರದ ಎಚ್.ರಾಂಪುರದ ಯುವತಿ ಬಿಂದು ಆರ್‌.ಡಿ. ಈ ರೀತಿ ನಿರ್ಧಾರ ಕೈಗೊಂಡಿದ್ದರು. ಬಿಂದು ಅವರು ಬಿ.ಇಡಿ, ಎಂ.ಎ (ಅರ್ಥಶಾಸ್ತ್ರ) ಮಾಡಿ ಎರಡು ತಿಂಗಳಿನಿಂದ ಕೂಡಲಸಂಗಮದಲ್ಲಿ ಪ್ರೌಢಶಾಲೆಯ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ.

ಕೂಡಲಸಂಗಮದಲ್ಲಿ ಪಂಚಮಸಾಲಿ‌ಮಠದ ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ಮಾಡುತ್ತಿರುವ ಆರ್.ಡಿ. ಬಿಂದು ಅವರಿಗೂ ಈಗಾಗಲೇ ಎರಡು ಬಾರಿ ಮದ್ವೆ ಕ್ಯಾನ್ಸಲ್‌ ಆಗಿದ್ದು ಇದಕ್ಕೆ ಕಾರಣ ಕೂಡ ರಸ್ತೆ ಸರಿಯಿಲ್ಲದೇ ಇರುವುದು. ಇದರಿಂದ ಬೇಸತ್ತಿದ್ದ ಡಿ.ಆರ್​. ಬಿಂದು ಎಂಬ ಯುವತಿ ಗ್ರಾಮಕ್ಕೆ ರಸ್ತೆ ಆಗುವವರೆಗೂ ಮದುವೆ ಆಗಲ್ಲವೆಂಬ ಸಂಕಲ್ಪ ಮಾಡಿದ್ದಳು.

ಸುಮಾರು 50 ಮನೆಗಳಿರುವ ಇನ್ನೂರರಷ್ಟು ಜನಸಂಖ್ಯೆ ಇರುವ ಪುಟ್ಟ ಊರು ಎಚ್‌.ರಾಂಪುರ. ಈ ಊರಿಗೆ ಸರಿಯಾದ ರಸ್ತೆಯೇ ಇಲ್ಲ. ಮಣ್ಣಿನ ರಸ್ತೆಯೊಂದು ಇದ್ದರೂ ಮಳೆ ಬಂದರೆ ಕೊಚ್ಚೆಯಾಗಿ ಬಿಡುತ್ತದೆ. ನಡೆದುಕೊಂಡು ಹೋಗುವವರೂ ಜಾರಿ ಬೀಳುತ್ತಾರೆ. ಹೀಗಾಗಿ ರಸ್ತೆಯಾಗುವವರೆಗೂ ಮದುವೆಯಾಗುವುದಿಲ್ಲ ಎಂದು ಬಿಂದು ಹೇಳಿದ್ದರು.

ಯುವತಿಯ ಸೈದ್ಧಾಂತಿಕ ಪ್ರತಿಭಟನೆಗೆ ಗ್ರಾಮಸ್ಥರು ಕೈ ಜೋಡಿಸಿದ್ದರು. ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಈ ಕುರಿತು ಬಿಂದು ಪತ್ರ ಬರೆದಿದ್ದರು. ಎಚ್.ರಾಂಪುರ ಗುಡ್ಡಗಾಡು ಪ್ರದೇಶದಲ್ಲಿದೆ. 50 ಮನೆ, 200 ಜನಸಂಖ್ಯೆ, 180 ಮತದಾರರು ಇರುವ ಪುಟ್ಟ ಗ್ರಾಮ. ಅಲ್ಲಿಗೆ ಹೋಗಲು ರಸ್ತೆಯೇ ಇಲ್ಲ, ಬಸ್ ಸಂಚಾರ ಕನಸಿನ ಮಾತು. ಇದೇ ಕಾರಣಕ್ಕೆ ಇಲ್ಲಿನ ಬಹುತೇಕ ಜನ ಶಿಕ್ಷಣದಿಂದ ವಂಚಿತರಾಗಿದ್ದಾರೆಂದು ಸಿಎಂ ಪತ್ರದಲ್ಲಿ ವಿವರಿಸಿದ್ದರು. ಸಿಎಂ ಸೂಚನೆ ಬೆನ್ನಲ್ಲೇ ಜಿಲ್ಲಾಧಿಕಾರಿ ತಂಡ ರಾಂಪುರಕ್ಕೆ ದೌಡಾಯಿಸಿತ್ತು. ಜಿಲ್ಲಾಧಿಕಾರಿ ಭೇಟಿ ಮಾಡಿದ ಮಾರನೇ ದಿನವೇ ರಸ್ತೆ ಕಾಮಗಾರಿ‌ ಆರಂಭವಾಗಿತ್ತು.

ಸದ್ಯ, ಎಚ್‌.ರಾಂಪುರ ಗ್ರಾಮಕ್ಕೆ ರಸ್ತೆ ಮಾತ್ರವಲ್ಲದೆ ಕೆಎಸ್​ಆರ್​ಟಿಸಿ ಬಸ್​ ಕೂಡ ಆಗಮಿಸಿದ್ದು, ಗ್ರಾಮದ ಬಹುದಿನಗಳ ಕನಸು ಈಡೇರಿದೆ. ಸದ್ಯಕ್ಕೆ ರಾಂಪುರಕ್ಕೆ ಮಣ್ಣಿನ ರಸ್ತೆಯಾಗಿದ್ದು, ಮುಂದೆ ಡಾಂಬರು ರಸ್ತೆಯು ನಿರ್ಮಾಣವಾಗಲಿದೆ. ಅದಕ್ಕಾಗಿ ಸಿದ್ಧತೆಗಳು ಕೂಡ ನಡೆಯುತ್ತಿವೆ. ಇನ್ನು ಗ್ರಾಮಕ್ಕೆ ಆಗಮಿಸಿದ ಕೆಎಸ್​ಆರ್​ಟಿಸಿ ಬಸ್‌ಗೆ ರಾಂಪುರದ ಮಹಿಳೆಯೊಬ್ಬರು ಪೂಜೆ ಮಾಡಿ ಸ್ವಾಗತಿಸಿದರು.

Edited By : Vijay Kumar
PublicNext

PublicNext

23/09/2021 08:16 am

Cinque Terre

59.28 K

Cinque Terre

1

ಸಂಬಂಧಿತ ಸುದ್ದಿ