ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಡ ಕುಟುಂಬಕ್ಕೆ ತಾತ್ಕಾಲಿಕ ವಸತಿ ವ್ಯವಸ್ಥೆ : ತಹಶೀಲ್ದಾರ ಪರಶುರಾಮ ಸತ್ತಿಗೇರಿ

ಗದಗ : ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದ ಬಸ್ತಿಕೆರೆಯ ಓಣಿಯ ನಿವಾಸಿ ಬಸವರಾಜ ನಿಂಗಪ್ಪ ಮಡಿವಾಳರ ಎಂಬ ವ್ಯಕ್ತಿಗೆ ಕೊರೊನಾ ಎಂಬ ಮಹಾಮಾರಿಯಿಂದ ದೃಷ್ಟಿ ಕಸಿದುಕೊಂಡರೆ ಅತಿಯಾದ ಮಳೆ ಬದುಕನ್ನೇ ಕಸಿದುಕೊಂಡಿತ್ತು ಎಂದು ನಿಮ್ಮ ಪಬ್ಲಿಕ್ ನೆಕ್ಸ್ಟ್ ಸೆ.1 ಕ್ಕೆ ವರದಿ ಮಾಡಿತ್ತು.

ಸದ್ಯ ನಮ್ಮ ವರದಿಗೆ ಎಚ್ಚೆತ್ತಕೊಂಡ ಲಕ್ಷ್ಮೇಶ್ವರ ಪಟ್ಟಣದ ತಹಶೀಲ್ದಾರ ಪರಶುರಾಮ ಸತ್ತಿಗೇರಿ ನೊಂದ ಕುಟುಂಬಕ್ಕೆ ತಾತ್ಕಾಲಿಕವಾಗಿ ಪುರಸಭೆ ಕ್ವಾಟರ್ಸ್ ನಲ್ಲಿ ಆಶ್ರಯ ವ್ಯವಸ್ಥೆ ಮಾಡಿದ್ದಾರೆ.

ಜೊತೆಗೆ ಅವರ ಕುಟುಂಬಕ್ಕೆ ಆಹಾರ ಕಿಟ್ ನೀಡಿ ಮಾನವೀಯತೆ ಮೆರೆದಿದ್ದಾರೆ. ಇನ್ನೂ ಆತನಿಗೆ ವಿಕಲಚೇತನ ಮಾಶಾಸನ ದೊರಕುವಂತೆ ಮಾಡುವ ಮೂಲಕ ತಹಶೀಲ್ದಾರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಇನ್ನೂ ಒಂದು ವಾರದಲ್ಲಿ ಮನೆಯನ್ನು ಹಾಕಿಸಿ ಕೊಡುತ್ತೇವೆ ಎಂದು ಭರವಸೆಯನ್ನು ಕೊಟ್ಟಿದ್ದಾರೆ.

Edited By : Nagesh Gaonkar
PublicNext

PublicNext

02/09/2022 06:26 pm

Cinque Terre

48.16 K

Cinque Terre

3

ಸಂಬಂಧಿತ ಸುದ್ದಿ