ಶಿವಮೊಗ್ಗ: ಪಾರ್ಶ್ವವಾಯು ಪೀಡಿತ ವೃದ್ಧೆಯೊಬ್ಬರನ್ನು ಆಸ್ಪತ್ರೆಗೆ ಸಾಗಿಸಲು ಸರಿಯಾದ ರಸ್ತೆ ಇಲ್ಲದ ಕಾರಣ ಬಿದಿರಿನ ಕೋಲಿಗೆ ಬೆಡ್‌ಶೀಟ್ ಕಟ್ಟಿ ಅದರಲ್ಲಿ ರೋಗಿಯನ್ನು ಮಲಗಿಸಿ ಹೊತ್ತು ಸಾಗಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಗೆ ಮೇಲ್ದರ್ಜೆಗೆ ಏರಿರುವ ಕಾರ್ಗಲ್-ಜೋಗ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿಯೇ ಇಂತಹ ದುರವಸ್ಥೆ ಕಂಡುಬಂದಿರುವುದು ವಿಪರ್ಯಾಸ. ಪಟ್ಟಣ ಪಂಜಾಯತಿ ವ್ಯಾಪ್ತಿಯ ವಾರ್ಡ್‌ಗಳಲ್ಲಿಯೇ ಇಂಥಾ ದುಸ್ಥಿತಿ ಇದ್ದರೆ, ಇನ್ನು ಕುಗ್ರಾಮಗಳಲ್ಲಿನ ಪರಿಸ್ಥಿತಿ ಏನಿರಬಹುದು ಎಂಬ ಟೀಕೆಗಳೂ ವ್ಯಕ್ತವಾಗಿವೆ. ಆದರೆ ಈ ಬಗ್ಗೆ ಇದುವರೆಗೆ ಜಿಲ್ಲಾಡಳಿತವಾಗಲೀ, ಸಾಗರ ತಾಲೂಕು ಆಡಳಿತವಾಗಲೀ ಅಥವಾ ಜೋಗ-ಕಾರ್ಗಲ್ ಪ.ಪಂ. ಆಡಳಿತ ವ್ಯವಸ್ಥೆಯಾಗಲೀ ಸ್ಪಷ್ಟನೆ ನೀಡಿಲ್ಲ.
PublicNext
01/06/2022 08:20 pm