ನವದೆಹಲಿ: ಡೆಡ್ಲಿ ಸೋಂಕು ಕೊರೊನಾ ಹಾವಳಿ ಮುಂದುವರೆದ ಕಾರಣ ಭಾರತ ಸರ್ಕಾರ ಮುಂಜಾಗೃತಾ ಕ್ರಮವಾಗಿ ಡಿಸೆಂಬರ್ 31ರವರೆಗೆ ಅಂತರಾಷ್ಟ್ರೀಯ ವಿಮಾನ ಹಾರಾಟ ನಿಷೇಧಿಸಿದೆ.
ಹೀಗಾಗಿ ವರ್ಷಾಂತ್ಯದವರೆಗೆ ಭಾರತದಿಂದ ಹಾಗೂ ಭಾರತಕ್ಕೆ ಯಾವುದೇ ವಿಮಾನಗಳ ಹಾರಾಟ ಇರುವುದಿಲ್ಲ.
ಬದಲಾಗಿ ಆಯ್ದ ಕೆಲವೇ ಮಾರ್ಗಗಳಲ್ಲಿ ಮಾತ್ರ ವಿಮಾನಗಳು ಹಾರಾಟ ನಡೆಸಲಿವೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ತಿಳಿಸಿದೆ.
ಈ ನಿರ್ಬಂಧಗಳು ಅಂತರಾಷ್ಟ್ರೀಯ ಆಲ್-ಕಾರ್ಗೋ ಕಾರ್ಯಾಚರಣೆಗಳು ಮತ್ತು ಡಿಜಿಸಿಎ ವಿಶೇಷವಾಗಿ ಅನುಮೋದಿಸಿದ ವಿಮಾನಗಳಿಗೆ ಅನ್ವಯಿಸುವುದಿಲ್ಲ.
ನಾಗರಿಕ ವಿಮಾನಯಾನ ನಿರ್ದೇಶಾನಲಯವು ನವೆಂಬರ್ 30ರವರೆಗೆ ಅಂತರಾಷ್ಟ್ರೀಯ ವಿಮಾನಯಾನ ಹಾರಾಟಕ್ಕೆ ನಿರ್ಬಂಧ ಹೇರಿತ್ತು.
ಈಗ ಈ ಅವಧಿಯನ್ನು ಡಿಸೆಂಬರ್ 31ರವರೆಗೆ ವಿಸ್ತರಿಸಲಾಗಿದ್ದು, ವಿಮಾನಗಳ ಹಾರಾಟ ಇರುವುದಿಲ್ಲ.
PublicNext
26/11/2020 06:14 pm