ಮಧುಗಿರಿ: ನ್ಯಾಯ ಬೆಲೆ ಅಂಗಡಿಯಲ್ಲಿ ವಿತರಿಸಿರುವ ಅಕ್ಕಿಯು ಕಳಪೆಯಿಂದ ಕೂಡಿದೆ ಎಂದು ಗ್ರಾಮಸ್ಥರು ಆರೋಪಿಸಿರುವ ಘಟನೆ ಮಧುಗಿರಿಯಲ್ಲಿ ನಡೆದಿದೆ. ಪಡಿತರ ವಿತರಣೆ ಅಕ್ಕಿಯನ್ನು ನೆನೆಸಿದಾಗ ಅಕ್ಕಿ ತೇಲುತ್ತಿತ್ತು. ಆ ತೇಲುವ ಅಕ್ಕಿ ರಬ್ಬರಿನ ಅಂಶದಂತೆ ಕೂಡಿದ್ದು, ಇದರಿಂದ ಆರೋಗ್ಯಕ್ಕೆ ಹಾನಿಕರವಾಗಲಿದೆ ಎಂದು ಭಯಗೊಂಡ ಗ್ರಾಮಸ್ಥರು ತಹಶೀಲ್ದಾರ್ ಗೆ ದೂರು ನೀಡಿದ್ದರು.
ಅದರಂತೆ ಗುರುವಾರ ತಾಲೂಕಿನ ಮರುವೇಕೆರೆ ವಿ.ಎಸ್.ಎಸ್.ಎನ್ ಗೆ ಭೇಟಿ ನೀಡಿದ ತಹಶೀಲ್ದಾರ್ ಸುರೇಶಾಚಾರ್ ಅಕ್ಕಿಯನ್ನು ಪರೀಕ್ಷಿಸಿ ಅಕ್ಕಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲು ಸೂಚಿಸಿದ್ದಾರೆ. ವರದಿ ಬಂದ ನಂತರ ಅಕ್ಕಿಯನ್ನು ಪಡಿತರದಾರರಿಗೆ ವಿತರಣೆ ಮಾಡುವಂತೆ ತಿಳಿಸಿದ್ದಾರೆ.
ಒಟ್ಟಾರೆ ಅಕ್ಕಿ ಅಸಲಿಯೋ ನಕಲಿಯೋ ಎನ್ನುವ ಸುದ್ದಿ ಕಾಡ್ಗಿಚ್ಚಿನಂತೆ ತಾಲೂಕಿನಾದ್ಯಂತ ಹಬ್ಬಿದೆ. ಸಾಮಾಜಿಕ ಜಾಲತಾಣದಲ್ಲೂ ಪಡಿತರ ಅಕ್ಕಿಯ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತಿವೆ.
ರಾಘವೇಂದ್ರ ದಾಸರಹಳ್ಳಿ, ಪಬ್ಲಿಕ್ ನೆಕ್ಸ್ಟ್, ತುಮಕೂರು
PublicNext
28/07/2022 07:49 pm