ಬೆಂಗಳೂರು: ಬಿಎಂಟಿಸಿ ಬಸ್‌ಗಳು ಹೊತ್ತು ಉರಿದಿವೆ. ಇದಕ್ಕೆ ಹಲವು ಸಾಕ್ಷಿಗಳು ಇವೆ. ಆದರೆ, ಈಗ ಹೊತ್ತಿ ಉರಿದ ಬಸ್‌ಗಳ ಒಟ್ಟು ವೆಚ್ಚವನ್ನ ಕಂಡೆಕ್ಟರ್ ಮತ್ತು ಡ್ರೈವರ್‌ಗಳಿಂದಲೇ ವಸೂಲಿ ಮಾಲು ಬಿಎಂಟಿಸಿ ನಿಗಮ ಮುಂದಾಗಿದೆ.
ಬಿಎಂಟಿಸಿ ಬಸ್ ಗಳನ್ನ ಅಶೋಕ್ ಲೈಲ್ಯಾಂಡ್ ಕಂಪನಿಯಿಂದಲೇ ಖರೀದಿಸಲಾಗಿದೆ. ಈ ಕಂಪನಿ ಈ ಬಸ್ ಗಳಲ್ಲಿದ್ದ ದೋಷದಿಂದಲೇ ಬಸ್ ರಸ್ತೆ ಮಧ್ಯೆ ಹೊತ್ತಿ ಉರಿದು ಹೋಗಿವೆ.
ಹೌದು. ಫೆಬ್ರವರಿ-1 ರಂದು ಬೆಂಗಳೂರಿನ ನಂದಾ ಥಿಯೇಟರ್ ಬಳಿ ಬಸ್ ಹೊತ್ತಿ ಉರಿದಿದೆ. ತಾವೂ ಸೇಫ್ ಆಗಿ ಪ್ರಯಾಣಿಕರನ್ನೂ ಡ್ರೈವರ್ ಮತ್ತು ಕಂಡೆಕ್ಟರ್ ರಕ್ಷಿಸಿದ್ದಾರೆ. ಇದೇ ರೀತಿ ಚಾಮರಾಜ ಪೇಟೆಯ ಮಕ್ಕಳ ಕೂಟದ ಸಮೀಪದಲ್ಲೂ ಇಂತಹದ್ದೇ ಒಂದು ಘಟನೆ ಆಗಿತ್ತು. ಅಷ್ಟೇ ಯಾಕೆ ಶೇಷಾದ್ರಿಪುರಂ ನಲ್ಲೂ ಒಂದು ಬಸ್ ಹೊತ್ತಿ ಉರಿದಿದೆ.
ಆದರೆ ಈ ಎಲ್ಲ ಬಸ್ ಉರಿದು ಹೋಗಿದಕ್ಕೆ ಸರಿಯಾದ ಕಾರಣವನ್ನ ಕೊಡಿ, ಇಲ್ಲವೇ ಹಾನಿಯಾದ ಬಸ್ ನ ರೊಕ್ಕ 13,61,311 ರೂಪಾಯಿ ನಿಗಮಕ್ಕೆ ಪಾವತಿಸಿ ಅಂತಲೇ ಆಯಾ ಬಸ್ ಗಳ ಕಂಡೆಕ್ಟರ್ ಮತ್ತು ಡ್ರೈವರ್ ಗೆ ನೋಟಿಸ್ ಜಾರಿ ಮಾಡಲಾಗಿದೆ.
PublicNext
16/05/2022 09:10 am