ಬಾಗ್‌ಪತ್: ಆಂಬ್ಯುಲೆನ್ಸ್ ಸಿಗದ ಕಾರಣಕ್ಕೆ ಎರಡು ವರ್ಷದ ತಮ್ಮನ ಶವವನ್ನು ಹತ್ತು ವರ್ಷದ ಅಣ್ಣ ಹೊತ್ತು ಸಾಗಿದ್ದಾನೆ. ಇದರ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಉತ್ತರ ಪ್ರದೇಶದ ಬಾಗ್‌ಪತ್ ಎಂಬಲ್ಲಿ ಈ ಘಟನೆ ನಡೆದಿದೆ. ಸಾಗರ್‌ಕುಮಾರ್ ಎಂಬ ಬಾಲಕನೇ ತಮ್ಮನ ಶವ ಹೊತ್ತು ಸಾಗಿದಾತ. ಕಲಾಕುಮಾರ್ ಎಂಬ ಮಗು ಮೃತಪಟ್ಟ ದುರ್ದೈವಿ. ಈ ಮಗು ಅಳುತ್ತಿದೆ ಎಂಬ ಕಾರಣಕ್ಕೆ ಮಗುವಿನ ಮಲತಾಯಿ ಮಗುವನ್ನು ಎತ್ತಿ ಹೆದ್ದಾರಿಗೆ ಬಿಸಾಕಿದ್ದಳು. ಈ ವೇಳೆ ವಾಹನ ಹರಿದು ಮಗು ಮೃತಪಟ್ಟಿತ್ತು. ಶವಪರೀಕ್ಷೆ ನಂತರ ಕುಟುಂಬಸ್ಥರಿಗೆ ಹಸ್ತಾಂತರಿಸಿದಾಗ ಶವ ಸಾಗಿಸಲು ಸಕಾಲಕ್ಕೆ ಆಂಬ್ಯುಲೆನ್ಸ್ ಸಿಕ್ಕಿಲ್ಲ. ಹೀಗಾಗಿ ಮೃತ ಮಗುವಿನ ಅಣ್ಣ ಸಾಗರ್‌ಕುಮಾರ್ ತಾನೇ ಮುಂದಾಗಿ ಶವ ಹೊತ್ತು ಸಾಗಿದ್ದಾನೆ.
ಮಗುವಿನ ಸಾವಿಗೆ ಕಾರಣವಾದ ಮಲತಾಯಿ ಸೀತಾ ಎಂಬಾಕೆಯನ್ನು ಬಂಧಿಸಿರುವ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
PublicNext
29/08/2022 05:20 pm