ನವದೆಹಲಿ: ಭಾರತದಲ್ಲಿನ ತನ್ನ ಎರಡು ಉತ್ಪಾದನಾ ಘಟಕಗಳನ್ನು ಸ್ಥಗಿತಗೊಳಿಸಲು ಪ್ರತಿಷ್ಟಿತ ಆಟೋಮೊಬೈಲ್ ಕಂಪನಿ ಫೋರ್ಡ್ ಹೇಳಿದೆ. ಈ ಎರಡು ಘಟಕಗಳು ಲಾಭದಾಯಕವಾಗಿಲ್ಲ ಎಂಬ ಕಾರಣವನ್ನು ಕಂಪನಿ ನೀಡಿದೆ. ಹೀಗಾಗಿ ಅಲ್ಲಿನ ಕಾರ್ಮಿಕರ ಸ್ಥಿತಿ ಅತಂತ್ರವಾಗಿದೆ.
ಫೋರ್ಡ್ ಮಸ್ಟಾಂಗ್ ಮತ್ತು ಮುಂದಿನ ದಿನಗಳಲ್ಲಿ ಬರಲಿರುವ ಹೈಬ್ರಿಡ್/ಎಲೆಕ್ಟ್ರಿಕ್ ವಾಹನಗಳನ್ನು ಆಮದು ಮೂಲಕ ಮಾರಾಟವನ್ನು ಮುಂದುವರಿಸುವುದಾಗಿ ಫೋರ್ಡ್ ಸಂಸ್ಥೆ ಹೇಳಿದೆ. ಹಾಲಿ ಗ್ರಾಹಕರಿಗೆ ಅಗತ್ಯ ಸೇವೆ ಒದಗಿಸಲು ಡೀಲರ್‌ಗಳಿಗೆ ಬೆಂಬಲ ಒದಗಿಸುವುದಾಗಿ ಭರವಸೆ ಕೊಟ್ಟಿದ್ದು, ಫಿಗೊ, ಅಸ್ಪೈರ್, ಫ್ರೀಸ್ಟೈಲ್, ಇಕೋಸ್ಪೋರ್ಟ್ ಮತ್ತು ಎಂಡೇವರ್ ಕಾರುಗಳ ಮಾರಾಟ ಡೀಲರ್‌ಗಳ ಬಳಿ ಇರುವ ಸ್ಟಾಕ್ ಮುಗಿಯುವವರೆಗೆ ಮುಂದುವರೆಯಲಿದೆ ಎಂದು ಕಂಪನಿ ತಿಳಿಸಿದೆ.
PublicNext
09/09/2021 08:06 pm