ದಿನದಿಂದ ದಿನಕ್ಕೆ ದುಬಾರಿ ದುನಿಯಾದಲ್ಲಿ ಜನಜೀವನದ ದುಸ್ಥರವಾಗುತ್ತಿದೆ. ಈಗಾಗಲೇ ಪೆಟ್ರೋಲ್, ಡೀಸೆಲ್ ದರ ಏರಿಕೆಯಿಂದಾಗಿ ಕಂಗೆಟ್ಟ ಜನಸಾಮಾನ್ಯರಿಗೆ ಎಲ್ ಪಿ ಜಿ ದರ ೇರಿಕೆ ಗಾಯದ ಮೇಲೆ ಬರೆ ಎಳೆದಂತ್ತಾಗಿದೆ. ಸಬ್ಸಿಡಿ ಇಲ್ಲದೆ 14.2 ಕೆಜಿ ಎಲ್ ಪಿಜಿ ಸಿಲಿಂಡರ್ ಬೆಲೆ 769 ರೂಗಳಿಂದ 794 ರೂ.ಗೆ ಏರಿದೆ. ಈ ಹೊಸ ಬೆಲೆಗಳು ಇಂದಿನಿಂದಲೇ (ಫೆಬ್ರವರಿ 25) ಜಾರಿಗೆ ಬಂದಿವೆ. ಈ ತಿಂಗಳು ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಇದು ಮೂರನೇ ಹೆಚ್ಚಳವಾಗಿದೆ.
ಸಬ್ಸಿಡಿ ರಹಿತ ಸಿಲಿಂಡರ್ ಗಳ ಬೆಲೆಯನ್ನು ಇಂದು 25 ರೂ.ವರೆಗೆ ಹೆಚ್ಚಿಸಲಾಗಿದೆ. ಎಲ್ ಪಿಜಿ ಸಿಲಿಂಡರ್ ಬೆಲೆ ಡಿಸೆಂಬರ್ ನಲ್ಲಿ ಎರಡು ಬಾರಿ ಹೆಚ್ಚಾಗಿದೆ. ಒಂದು ತಿಂಗಳಲ್ಲಿ 100 ರೂಪಾಯಿಗಳ ಹೆಚ್ಚಳ ಕಂಡುಬಂದಿದೆ.
ಇನ್ನು ಫೆಬ್ರವರಿ ತಿಂಗಳಲ್ಲಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಮೂರು ಬಾರಿ ಹೆಚ್ಚಿಸಲಾಗಿದೆ. ಫೆಬ್ರವರಿ 4 ರಂದು 25 ರೂ.ಗೆ ಫೆ. 15 ರಂದು 50 ರೂ. ಈಗ ಮತ್ತೆ 25 ರೂಪಾಯಿಗಳನ್ನು ಹೆಚ್ಚಿಸಿರುವುದು ಮೂರನೇ ಬಾರಿ. ಫೆಬ್ರವರಿ 4 ರಂದು ಹೆಚ್ಚಿದ ನಂತರ ಅದರ ಬೆಲೆ 644 ರೂ.ಗಳಿಂದ 719 ರೂ.ಗೆ ಏರಿದೆ. ಫೆಬ್ರವರಿ 15 ರಂದು ಬೆಲೆ 719 ರೂ.ನಿಂದ 769 ರೂ.ಗೆ ಮತ್ತು ಫೆಬ್ರವರಿ 25 ರಂದು ಬೆಲೆ 769 ರಿಂದ 794 ರೂ.ಗೆ ಏರಿತು.
PublicNext
25/02/2021 12:50 pm