ಭೋಪಾಲ್ : ರಸ್ತೆ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ಬುಲ್ಡೋಜರ್ ನಲ್ಲಿ ಆಸ್ಪತ್ರೆಗೆ ಸಾಗಿಸಿದ ಘಟನೆ ಮಧ್ಯಪ್ರದೇಶದ ಕಟ್ನಿಯಲ್ಲಿ ನಡೆದಿದೆ. ಹೌದು ಅಪಘಾತವಾದ ಸಂದರ್ಭದಲ್ಲಿ ಅರ್ಧಗಂಟೆಗೂ ಅಧಿಕ ಕಾಲ ಆಂಲುಲೆನ್ಸ್ ಗೆ ಕಾಯಲಾಗಿದೆ. ಆದ್ರೆ ಸಕಾಲಕ್ಕೆ ಆ್ಯಂಬುಲೆನ್ಸ್ ಬರದ ಕಾರಣ ಸ್ಥಳೀಯರು ಗಾಯಾಳುವಿನ ರಕ್ತಸ್ರಾವ ಹೆಚ್ಚಾಗುತ್ತಿದ್ದಂತೆ ವಿಧಿಯಿಲ್ಲದೆ ಬುಲ್ಡೋಜರ್ ನಲ್ಲಿಯೇ ಆಸ್ಪತ್ರೆಗೆ ಕರೆತಂದಿದ್ದಾರೆ.
ಸದ್ಯ ವ್ಯಕ್ತಿಯನ್ನು ಬುಲ್ಡೋಜರ್ ನಲ್ಲಿ ಹೊತ್ತೊಯ್ಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
PublicNext
13/09/2022 09:42 pm