ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಈಡೇರಿದ ಸಂಕಲ್ಪ : 21 ವರ್ಷದ ಗಡ್ಡಕ್ಕೆ ಕತ್ತರಿ

ರಾಯ್ಪುರ: ಕೆಲವರು ತಮ್ಮ ಕೆಲಸ ಕಾರ್ಯಗಳು ಈಡೇರುವವರೆಗೂ ಕೂದಲು ಕತ್ತರಿಸುವುದಿಲ್ಲ, ಗಡ್ಡ ಮೀಸೆ ತೆಗೆಯುವುದಿಲ್ಲ ಎಂದು ಶಪಥ ಮಾಡಿರುವವರನ್ನು ನೋಡಿದ್ದೇವೆ. ಸದ್ಯ ಇಲ್ಲೊಬ್ಬ ವ್ಯಕ್ತಿ ತಮ್ಮ ಸಂಕಲ್ಪ ಈಡೇರಿಲ್ಲ ಎಂದು ಬರೋಬ್ಬರಿ 21 ವರ್ಷಗಳಿಂದ ಗಡ್ಡ ತೆಗೆದಿರಲಿಲ್ವಂತೆ.

ಹೌದು ತನ್ನ ಸಂಕಲ್ಪ ಈಡೇರುವವರೆಗೆ ಗಡ್ಡವನ್ನು ಕತ್ತರಿಸುವುದಿಲ್ಲವೆಂದು ಪ್ರತಿಜ್ಞೆ ಮಾಡಿದ್ದ ವ್ಯಕ್ತಿ ಬರೋಬ್ಬರಿ 21 ವರ್ಷಗಳ ಬಳಿಕ ಶುಕ್ರವಾರ ತಮ್ಮ ಸಂಕಲ್ಪ ಈಡೇರಿದ ಹಿನ್ನೆಲೆ ಗಡ್ಡವನ್ನು ತೆಗೆಸಿಕೊಂಡಿದ್ದಾರೆ.

ಛತ್ತೀಸ್ ಗಢದ ವ್ಯಕ್ತಿ ರಾಜ್ಯದ ಮನೇಂದ್ರಗಢ-ಚಿರ್ಮಿರಿ-ಭಾರತ್ಪುರ ಹೊಸ ಜಿಲ್ಲೆಯಾಗುವವರೆಗೆ ತಾವು ಗಡ್ಡವನ್ನು ಕತ್ತರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು. ಇದೀಗ ಛತ್ತೀಸ್ ಗಢ ಸರ್ಕಾರ ಎಂಸಿಬಿಯನ್ನು ರಾಜ್ಯದ 32ನೇ ಜಿಲ್ಲೆಯಾಗಿ ಗುರುತಿಸಿದೆ. ಈ ಹಿನ್ನೆಲೆ ವ್ಯಕ್ತಿ ಕನಸು ನನಸಾಗಿರುವುದರಿಂದ ತನ್ನ ಗಡ್ಡಕ್ಕೆ ಕತ್ತರಿ ಹಾಕಿದ್ದಾರೆ.

ಈ ವ್ಯಕ್ತಿಯ ಹೆಸರು ರಾಮಶಂಕರ್ ಗುಪ್ತಾ. ಇವರು ಮಹೇಂದ್ರಗಢ ನಿವಾಸಿಯಾಗಿದ್ದು, ಆರ್ ಟಿಐ ಕಾರ್ಯಕರ್ತರೂ ಆಗಿದ್ದಾರೆ. ಮನೇಂದ್ರಗಢ-ಚಿರ್ಮಿರಿ-ಭಾರತ್ ಪುರವನ್ನು ಹೊಸ ಜಿಲ್ಲೆಯನ್ನಾಗಿ ಮಾಡುವ ಘೋಷಣೆಯನ್ನು ಕಳೆದ ವರ್ಷ ಆಗಸ್ಟ್ ನಲ್ಲಿಯೇ ಮಾಡಲಾಗಿತ್ತು. ಈ ಹಿನ್ನೆಲೆ ಗುಪ್ತಾ ಅವರು 21 ವರ್ಷಗಳ ಬಳಿಕ ಗಡ್ಡವನ್ನು ಕತ್ತರಿಸಿದ್ದರು. ಆದರೆ ಹೊಸದಾಗಿ ಘೋಷಣೆಯಾದ ಜಿಲ್ಲೆ ಉದ್ಘಾಟನೆಗೊಳ್ಳಲು ಮತ್ತೊಂದು ವರ್ಷವೇ ಬೇಕಾಯಿತು. ತಾನು ಮಾಡಿದ ಸಂಕಲ್ಪದಂತೆ ಗುಪ್ತಾ ಅವರು ಮತ್ತೆ ತನ್ನ ಗಡ್ಡವನ್ನು ಕತ್ತರಿಸದೇ ಬಿಟ್ಟಿದ್ದರು. ಇದೀಗ ಶುಕ್ರವಾರ ಎಂಸಿಬಿಯನ್ನು ಹೊಸ ಜಿಲ್ಲೆಯಾಗಿ ಉದ್ಘಾಟನೆಗೊಳಿಸುತ್ತಲೇ ಗುಪ್ತಾ ಕ್ಲೀನ್ ಶೇವ್ ಮಾಡಿಕೊಂಡಿದ್ದಾರೆ.

Edited By : Nirmala Aralikatti
PublicNext

PublicNext

11/09/2022 09:32 pm

Cinque Terre

59.39 K

Cinque Terre

1