ಗದಗ: ನರಗುಂದ ಪಟ್ಟಣದ ಅಪ್ಪು ಅಂತಾನೇ ಫೇಮಸ್ ಆಗಿರುವ ರಾಜರತ್ನನ ಅಪ್ಪಟ ಅಭಿಮಾನಿ ಮಾರುತಿ ಬೆಣವಣಕಿ ಅವರ ಮಗುವಿಗೆ ಪುನೀತ್ ರಾಜಕುಮಾರ್ ಅಂತ ನಾಮಕರಣ ಮಾಡಲಾಗಿದೆ.
ಅಪ್ಪು ಅಭಿಮಾನಿ ಮಾರುತಿ ಬಯಕೆಯಂತೆ ಬೆಂಗಳೂರಿನ ಸದಾಶಿವ ನಗರದಲ್ಲಿರೋ ತಮ್ಮ ನಿವಾಸಕ್ಕೆ ಕರೆಸಿಕೊಂಡ ರಾಘವೇಂದ್ರ ರಾಜಕುಮಾರ್ ಅವರು ತಾವೇ ಹೆಸರಿಟ್ಟು ಹರಿಸಿದ್ದಾರೆ. 'ಅಪ್ಪು ಕುಟುಂಬಸ್ಥರೇ ನನ್ನ ಮಗುವಿಗೆ ಹೆಸರಿಡಬೇಕು ಅಂತ ಮಾರುತಿ ತಮ್ಮ ಬಯಕೆಯನ್ನ ಹೇಳಿಕೊಂಡಿದ್ರು. ಪಬ್ಲಿಕ್ ನೆಕ್ಸ್ಟ ಆ್ಯಪನಲ್ಲಿ ಆಗಸ್ಟ್ 20ಕ್ಕೆ ಅಪ್ಪು ಅಭಿಮಾನಿಯ ವಿಶಿಷ್ಟ ಬಯಕೆಯ ಬಗ್ಗೆ ವರದಿ ಪ್ರಕಟವಾಗಿತ್ತು. ಸುದ್ದಿ ಗಮನಿಸಿದ್ದ ರಾಜ್ ಕುಮಾರ್ ಅಭಿಮಾನಿ ಸಂಘದ ಸದಸ್ಯರಾದ ರಾಮು ಬಳ್ಳಾರಿ, ರೇಖಾ ಬಂಗಾರಶೆಟ್ಟರ್, ಮಂಜು ಕೊಟ್ಟೂರು, ಚಂದ್ರಶೇಖರಗೌಡ ರಾಜ್ ಕುಟುಂಬದ ಗಮನಕ್ಕೆ ತಂದಿದಾರೆ. ಅಲ್ಲದೆ ರಾಘಣ್ಣ ಅವರ ಗಮನಕ್ಕೆ ತಂದು ಆಗಸ್ಟ್ 29ಕ್ಕೆ ಸದಾಶಿವ ನಗರದ ರಾಘಣ್ಣ ನಿವಾಸದಲ್ಲಿ ನಾಮಕರಣ ಕಾರ್ಯಕ್ರಮ ದಿನಾಂಕ ಫಿಕ್ಸ್ ಮಾಡಿಸಿದ್ದರು. ನರಗುಂದದಿಂದ ಚಂದ್ರಶೇಖರಗೌಡ ಪಾಟೀಲ ವಾಹನ ವ್ಯವಸ್ಥೆ ಮಾಡಿದ್ರು.. ಸದಾಶಿವ ನಗರದ ರಾಘವೇಂದ್ರ ರಾಜಕುಮಾರ್ ನಿವಾಸದಲ್ಲೇ ಕುಟುಂಬಸ್ಥರ ಸಮ್ಮುಖದಲ್ಲೆ ರಾಗಣ್ಣ ಮಗುವಿಗೆ ಅಪ್ಪು ಹೆಸರಿಟ್ಟಿದ್ದಾರೆ..
ಪಬ್ಲಿಕ್ ನೆಕ್ಸ್ಟ ಆ್ಯಪ್ ಟೀಮ್‌ಗೆ ಮಾರುತಿ ಹಾಗೂ ಚಂದ್ರಶೇಖರ್ ಗೌಡ ಧನ್ಯವಾದ ತಿಳಿಸಿದ್ದಾರೆ.
PublicNext
30/08/2022 04:42 pm